ಧಾರವಾಡ: ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಅದರ ವಿರುದ್ಧ ಹೋರಾಟ ಮಾಡಿದ್ದ ಪಿಎಸ್ಐ ಅಭ್ಯರ್ಥಿ ರವಿಶಂಕರ್ ಎನ್ನುವವರಿಗೆ ಧಮ್ಕಿ ಹಾಕಲಾಗಿದೆ.
ವಾಟ್ಸಾಪ್ ಮೂಲಕ ರವಿಶಂಕರ್ ಅವರಿಗೆ ಧಮ್ಕಿ ಹಾಕಲಾಗಿದೆ. ರವಿಶಂಕರ ಮೂಲತಃ ಯಾದಗಿರಿ ಜಿಲ್ಲೆಯವರು. ಧಾರವಾಡದಲ್ಲಿ ಕೋಚಿಂಗ್ ಪಡೆಯುತ್ತಿರುವ ಅವರು, ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಅದರ ವಿರುದ್ಧ ಹೋರಾಟ ಮಾಡಿದ್ದರು. ಈ ಹೋರಾಟದ ಫಲವಾಗಿ ಸರ್ಕಾರ ಪಿಎಸ್‌ಐ ನೇಮಕಾತಿ ಪರೀಕ್ಷೆಯನ್ನೇ ರದ್ದುಗೊಳಿಸಿತ್ತು. ಇದೇ ವಿಷಯವಾಗಿ ರವಿಶಂಕರ ಅವರಿಗೆ ಅಸ್ಲಾಂ ಎನ್ನುವ ವ್ಯಕ್ತಿ, ಆರ್.ಡಿ.ಪಾಟೀಲ ಅವರು ಹೊರಗೆ ಬಂದ ಮೇಲೆ ನೀನು ಪಿಎಸ್ಐ ಹೇಗೆ ಆಗ್ತಿಯಾ ನೋಡೋಣ. ಗೌಡ್ರು ನಿನ್ನಿಂದಲೇ ಜೈಲಿಗೆ ಹೊಗಿದ್ದಾರೆ. ಅಫ್ಜಲಪುರ ಜನರ ಪವರ್ ಏನು ಅಂತಾ ತೋರಸ್ತೀವಿ ಎಂದು ವಾಟ್ಸಪ್ ಸಂದೇಶದ ಮೂಲಕ ಧಮ್ಕಿ ಹಾಕಿದ್ದಾನೆ.
ಅಸ್ಲಾಂ ಮೂಲತಃ ಕಲಬುರ್ಗಿ ಜಿಲ್ಲೆ ಅಫ್ಜಲಪುರ ತಾಲೂಕಿನ ಮಣ್ಣೂರು ಗ್ರಾಮದವನು. ಈತ ಈ ರೀತಿ ಬೆದರಿಕೆ ಸಂದೇಶ ಕಳುಹಿಸಿದ್ದರಿಂದ ರವಿಶಂಕರ ಅವರು ಧಾರವಾಡದ ವಿದ್ಯಾಗಿರಿ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ.
Kshetra Samachara
28/05/2022 12:31 pm