ಕಲಘಟಗಿ: ಕಲಘಟಗಿ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟಗಾರರ ಉಪಟಳ ಹೆಚ್ಚಾಗಿದೆ. ಆದರೂ ಇಲ್ಲಿನ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಸುಮ್ಮನಿದ್ದಾರೆ.
ಪ್ರತಿ ಗ್ರಾಮೀಣ ಬಾಗದಲ್ಲಿ ಪ್ರತಿ ಹೋಟೇಲ್ ಹಾಗೂ ಕಿರಾಣಿ ಶಾಪಗಳಲ್ಲಿ ಎಗ್ಗಿಲ್ಲದೇ ಮದ್ಯ ಮಾರಾಟ ಮಾಡಲಾಗುತ್ತಿದ್ದು ಗ್ರಾಮೀಣ ಬಾಗದ ಯುವಕರು ದುಡಿಮೆಯನ್ನು ಬಿಟ್ಟು ಕುಡಿತದ ಚಟಕ್ಕೆ ಅಂಟಿಕೊಂಡು ತಮ್ಮ ಅಲ್ಪ ಸ್ವಲ್ಪ ಗಳಿಕೆಯನ್ನೂ ಹಾಳು ಮಾಡಿಕೊಳ್ಳುತ್ತಿದ್ದಾರೆ.
ತಾಲೂಕಿನಲ್ಲಿ ಇಷ್ಟೆಲ್ಲ ಅಕ್ರಮ ನಡೆಯುತ್ತಿದ್ದರೂ ಇಲ್ಲಿಯ ಅಧಿಕಾರಿಗಳು ಸುಮ್ಮನೆ ಕೂತಿರೋದು ಯಾಕೆ ಎಂಬುದು ತಿಳಿಯುತ್ತಿಲ್ಲ. ಅದೆ ರೀತಿ ಕಲಘಟಗಿ ಪಟ್ಟಣದಲ್ಲಿ ಪರವಾನಿಗಿ ಇಲ್ಲದ ಎಷ್ಟೋ ಹೋಟೆಲ್‌ಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಲೀಲಾಜಾಲವಾಗಿ ಈ ದಂಧೆ ನಡೆಯುತ್ತಿರುವುದನ್ನ ನೋಡಿದ್ರೆ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದಾರಾ? ಎಂಬ ಅನುಮಾನ ಮೂಡಿತ್ತಿದೆ.
ಎನೇ ಆಗಲಿ ಪ್ರತಿ ಗ್ರಾಮೀಣ ಭಾಗದಲ್ಲಿ ರಾಜಾರೋಷವಾಗಿ ಮದ್ಯ ಮಾರುತ್ತಿರುವ ಕಾರಣ ಎಷ್ಟೋ ಕುಟುಂಬಗಳು ಬೀದಿಗೆ ಬರುತ್ತಿರೋದಂತು ಸತ್ಯ. ಕೂಡಲೆ ಇಲ್ಲಿಯ ಶಾಸಕರು ಹಾಗೂ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಇದಕ್ಕೆ ಜನರೆ ಉತ್ತರ ನೀಡುವ ಸಂಭವ ಇದೆ.
Kshetra Samachara
25/05/2022 09:29 pm