ಧಾರವಾಡ: ಮೊಬೈಲ್ ರಿಚಾರ್ಜ್ ಮಾಡಿಸಲು ತಂದೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಯುವಕನೋರ್ವ ತ್ರಿಶೂಲವನ್ನು ತನ್ನ ಮರ್ಮಾಂಗಕ್ಕೆ ಸಿಕ್ಕಿಸಿಕೊಂಡ ವಿಚಿತ್ರ ಘಟನೆ ಧಾರವಾಡ ಸಮೀಪದ ನವಲೂರು ಗ್ರಾಮದಲ್ಲಿ ನಡೆದಿದೆ.
ಮೈಲಾರಿ ತಿಪ್ಪಣ್ಣವರ ಎಂಬ 20 ವರ್ಷದ ಯುವಕನೇ ತ್ರಿಶೂಲವನ್ನು ತನ್ನ ಮರ್ಮಾಂಗಕ್ಕೆ ಸಿಕ್ಕಿಸಿಕೊಂಡವನು.
ಮೊಬೈಲ್ ರಿಚಾರ್ಜ್ ಮಾಡಲು ತಂದೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಮೈಲಾರಿ ಮೈಲಾರನ ವೇಷ ಧರಿಸಿ, ಭಂಡಾರ ಹಚ್ಚಿಕೊಂಡು ತ್ರಿಶೂಲವನ್ನು ತನ್ನ ಮರ್ಮಾಂಗಕ್ಕೆ ಸಿಕ್ಕಿಸಿಕೊಂಡಿದ್ದಾನೆ.
ನಿತ್ರಾಣ ಸ್ಥಿತಿಯಲ್ಲಿದ್ದ ಮೈಲಾರಿಯನ್ನು ಕಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/05/2022 05:05 pm