ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಂಗಳಗಟ್ಟಿಯಲ್ಲಿ ಮಗನಿಂದಲೇ ತಂದೆಯ ಕೊಲೆ !

ಧಾರವಾಡ: ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ಹೆತ್ತ ಮಗನೇ ತಂದೆಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಪುಂಡಲೀಕ ಒಂಟಿಗಡ ಎಂಬಾತನೇ ಮಗನಿಂದ ಹತ್ಯೆಗೀಡಾದವನು.

ಪುಂಡಲೀಕ ಪ್ರತಿನಿತ್ಯ ಮದ್ಯ ಕುಡಿದು ಬಂದು ಹೆಂಡತಿ ಜೊತೆ ಜಗಳವಾಡುತ್ತಿದ್ದ. ಬುಧವಾರ ಇದೇ ರೀತಿ ಪುಂಡಲೀಕ ಜಗಳವಾಡಿದ್ದಾನೆ. ಈ ಜಗಳ ವಿಕೋಪಕ್ಕೆ ತಿರುಗಿ ಸ್ವತಃ ಪುಂಡಲೀಕನ ಮಗನೇ ಕೊಡಲಿಯಿಂದ ಹತ್ಯೆ ಮಾಡಿದ್ದಾನೆ.

ಹತ್ಯೆ ಮಾಡಿದ ಮಗ ಅಪ್ರಾಪ್ತನಾಗಿದ್ದಾನೆ. ಘಟನಾ ಸ್ಥಳಕ್ಕೆ ಗರಗ ಠಾಣೆ ಪಿಎಸ್ಐ ಕಿರಣ ಮೋಹಿತೆ, ಸಿಪಿಐ ಪಾಟೀಲ ಹಾಗೂ ಡಿವೈಎಸ್ಪಿ ಸಂಕದ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By :
Kshetra Samachara

Kshetra Samachara

27/04/2022 10:52 pm

Cinque Terre

59.23 K

Cinque Terre

14

ಸಂಬಂಧಿತ ಸುದ್ದಿ