ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗಲಭೆ ಮಾಸ್ಟರ್ ಮೈಂಡ್‌ನ ಇಬ್ಬರು ಸಹಚರರ ಬಂಧನ

ಹುಬ್ಬಳ್ಳಿ: ಮೊನ್ನೆ ಶನಿವಾರ ರಾತ್ರಿ ನಡೆದ ಗಲಭೆಯನ್ನು ಗಂಭೀರವಾಗಿ ಪರಿಗಣಿಸಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಗಲಭೆಯ ಮಾಸ್ಟರ್ ಮೈಂಡ್ ನ ಸಹಚರರನ್ನು ಬಂಧನ ಮಾಡಿದೆ.

ಕೋಮು ಗಲಭೆ ಮಾಸ್ಟರ್ ಮೈಂಡ್ ಎಂದು ಗುರುತಿಸಿಕೊಂಡಿದ್ದ ಸಹಚರರಾದ ಇಬ್ಬರನ್ನೂ ಬಂಧಿಸಿರುವ ಖಾಕಿ ಪಡೆ ಜೈಲಿಗಟ್ಟಿದೆ. ಬೆಂಗಳೂರಿನ ಕಾಟನ್ ಪೇಟೆಯಲ್ಲಿ ಬಂಧಿಸಿದ ಪೊಲೀಸರು, ಬೆಂಗಳೂರಿನಿಂದ ಹುಬ್ಬಳ್ಳಿಗೆ ಕರೆತಂದಿದ್ದಾರೆ.

ಇನ್ನೂ ಕೇಶ್ವಾಪುರ ಇನ್ಸ್ ಪೆಕ್ಟರ್ ಜಗದೀಶ್ ಹಂಚಿನಾಳ ನೇತೃತ್ವದ ಟೀಂ ನಿಂದ ತುಫೆಲ್ ಮುಲ್ಲಾ ಹಾಗೂ ರೌಡಿ ಶೀಟರ್ ಮುಲಿಕ್ ಬೇಪಾರಿ ಬಂಧನ ಮಾಡಿದ್ದು, ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಯಿಂದ ಕಾರಾಗೃಹಕ್ಕೆ ಕರೆದುಕೊಂಡು ಹೋಗಿದ್ದಾರೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/04/2022 04:41 pm

Cinque Terre

142.59 K

Cinque Terre

24

ಸಂಬಂಧಿತ ಸುದ್ದಿ