ಧಾರವಾಡ: ಧಾರವಾಡದ ಹಿರಿಯ ಸಂಶೋಧಕರಾಗಿದ್ದ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಆರೋಪಿಗಳನ್ನು ಪೊಲೀಸರು ಇಂದು ಬಿಗಿ ಬಂದೋಬಸ್ತ್ ಮಧ್ಯೆ ಧಾರವಾಡದ 4ನೇ ಹೆಚ್ಚುವರಿ ನ್ಯಾಯಾಲಯದ ಎದುರು ಹಾಜರು ಪಡಿಸಿದರು.
ಅಮೋಲ್ ಕಾಳೆ, ಪ್ರವೀಣ ಚತುರ್, ಗಣೇಶ ಮಿಸ್ಕಿನ್, ಅಮಿತ್ ಬುದ್ಧಿ, ವಾಸುದೇವ ಸೂರ್ಯವಂಶಿ ಹಾಗೂ ಶರತ್ ಕಲಾಸ್ಕರ್ ಎಂಬವರನ್ನು ಪೊಲೀಸರು ಬೆಳಿಗ್ಗೆ ಕೋರ್ಟ್ ಗೆ ಹಾಜರುಪಡಿಸಿದರು. ಬೆಳಿಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಮಧ್ಯಾಹ್ನ 3.30ಕ್ಕೆ ಮತ್ತೆ ವಿಚಾರಣೆ ಮುಂದೂಡಿತು. ಮಧ್ಯಾಹ್ನದಿಂದ ಸಂಜೆ 6 ಗಂಟೆವರೆಗೆ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಮತ್ತೆ ವಿಚಾರಣೆಯನ್ನು ಮೇ 10ಕ್ಕೆ ಮುಂದೂಡಿದೆ.
ಕಲಬುರ್ಗಿ ಹತ್ಯೆ ಆರೋಪಿ ಗಣೇಶ ಮಿಸ್ಕಿನ್ ನನ್ನು ಪೊಲೀಸರು ಬಂದೋಬಸ್ತ್ ಮಧ್ಯೆ ಕರೆದೊಯ್ಯುವ ವೇಳೆ ಪ್ರತಿಕ್ರಿಯೆ ನೀಡಿದ ಗಣೇಶ, ನಾವು ನಿರಪರಾಧಿಗಳಾಗಿ ಹೊರಬರುವುದಂತೂ ಸತ್ಯ. 4 ವರ್ಷಗಳಿಂದ ನಾವು ಒಳಗಡೆ ಇದ್ದೇವೆ. ನಮ್ಮ ಮೇಲಿನ ಆರೋಪದ ಬಗ್ಗೆ ಇರುವ ಸುಳ್ಳು ಮಾಹಿತಿಯನ್ನು ನಮ್ಮವರು ಹೊರಗಡೆ ತೆಗೆಯುತ್ತಿದ್ದಾರೆ. ನಮ್ಮ ಬಗ್ಗೆ ಜನರಿಗೆ ಗೊತ್ತಾಗುತ್ತದೆ. ಮಾಧ್ಯಮದವರು ನಮಗೆ ಸಪೋರ್ಟ್ ಮಾಡಬೇಕು ಎಂದ.
ಇಂದು ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರಿಂದ ಅವರ ಕುಟುಂಬಸ್ಥರು ಕೂಡ ಆಗಮಿಸಿದ್ದರು. ಇದೇ ವೇಳೆ ಆರೋಪಿಗಳು ತಮ್ಮ ಕುಟುಂಬಸ್ಥರನ್ನು ಕಂಡು ಮಾತನಾಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/04/2022 09:26 pm