ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದ್ವೇಷದ ಅಮಲಿಗೆ ಬಲಿಯಾಗುತ್ತಿವೆ ಜೀವ; ಶಿಕ್ಷಣ ಕಾಶಿ ಖ್ಯಾತಿ ಜಿಲ್ಲೆಗೆ ಕ್ರೈಂ ಕರಿ ನೆರಳು.!

ಹುಬ್ಬಳ್ಳಿ: ಧಾರವಾಡ ಶಿಕ್ಷಣ ಕಾಶಿ ಎಂದೇ ಖ್ಯಾತಿ ಪಡೆದ ಜಿಲ್ಲೆ. ಸಾಹಿತ್ಯ, ಶಿಕ್ಷಣ, ಸಂಸ್ಕೃತಿ ಬೆಳೆಯುತ್ತಿರುವ ರೀತಿಯಲ್ಲಿ ಕ್ರೈಂ ಕೂಡ ಹೆಚ್ಚುತ್ತಿವೆ. ಕಳೆದ ಐದು ವರ್ಷ ಜಿಲ್ಲೆಗೆ ಕರಾಳ ವರ್ಷವಾಗಿಯೇ ಪರಿಣಮಿಸಿದೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಬಿಚ್ಚಿಡುತ್ತಿದೆ ಸ್ಫೋಟಕ ಮಾಹಿತಿ.

ಬಡ್ಡಿಗೆ ಪಡೆದ ಹಣ ಮರಳಿ ನೀಡದ, ಕೌಟುಂಬಿಕ ಕಲಹ, ಪ್ರೀತಿ ನಿರಾಕರಣೆ, ಮದ್ಯದ ನಶೆ, ಅನೈತಿಕ ಸಂಬಂಧದ ಜೊತೆಗೆ ಕ್ಷುಲ್ಲಕ ಕಾರಣ ಹೀಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರ‌ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ ಬರೋಬ್ಬರಿ 188 ಮಂದಿ‌ ಹತ್ಯೆಯಾಗಿದ್ದಾರೆ. ಹು-ಧಾ ಪೊಲೀಸ್ ಕಮಿಷನರೇಟ್‌ನಲ್ಲಿ 88 ಮಂದಿ, ಧಾರವಾಡ ಜಿಲ್ಲೆಯ ವಿವಿಧೆಡೆ 100 ಮಂದಿ ಹತರಾಗಿದ್ದಾರೆ. ಬಹುತೇಕ ಕೊಲೆಗಳಿಗೆ ದ್ವೇಷ ಹಾಗೂ ಹಣಕಾಸಿನ ವ್ಯವಹಾರ ಕಾರಣವಾಗಿದ್ದರೆ, ಕೆಲವು ಕೊಲೆಗಳು ವರದಕ್ಷಿಣೆ, ಕೌಟುಂಬಿಕ ಕಲಹ, ಪ್ರೀತಿ-ಪ್ರೇಮ, ಮದ್ಯದ ನಶೆಯಿಂದಲೂ ನಡೆದಿವೆ. ದ್ವೇಷ, ಪ್ರತಿಷ್ಠೆಗೂ ಕೆಲವು ರೌಡಿಗಳು ಬಲಿಯಾಗಿದ್ದಾರೆ. ಅತ್ಯಾಚಾರ ಮಾಡಿ, ಕೆಲವು ಮಹಿಳೆಯರನ್ನು ಹತ್ಯೆ ಮಾಡಲಾಗಿದೆ.

ಐದಾರು ವರ್ಷಗಳ ಹಿಂದೆ ದಾಖಲಾದ ಬಹುತೇಕ ಕೊಲೆ ಪ್ರಕರಣಗಳ ವಿಚಾರಣೆ ಮುಗಿದು ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಇತ್ತೀಚೆಗಿನ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ಸಾಕ್ಷಿಗಳನ್ನು ಸಂಗ್ರಹಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸುತ್ತಿದ್ದಾರೆ. ರಾಜಕೀಯ ಹಿನ್ನೆಲೆಯಲ್ಲಿಯೂ ಹತ್ಯೆ ನಡೆಯುತ್ತವೆ. ರಾಜಕೀಯ, ಪ್ರತಿಷ್ಠೆ ಹಾಗೂ ಹಣಕಾಸಿನ ವಿಷಯಕ್ಕೆ ಸಂಬಂಧಿಸಿ ಅವರ ಹತ್ಯೆ ನಡೆದಿದೆ. ಸಣ್ಣಪುಟ್ಟ ಕಲಹಕ್ಕೂ, ಮದ್ಯದ ಅಮಲಿನಲ್ಲಿಯೂ ಕೊಲೆಗಳು ನಡೆಯುತ್ತವೆ.

ಒಟ್ಟಿನಲ್ಲಿ ಮನರಂಜನೆ ಹೆಸರಲ್ಲಿ ಬಿತ್ತರವಾಗುವ ಮಚ್ಚು-ಲಾಂಗುಗಳ ಪ್ರಚೋದನಕಾರಿ ದೃಶ್ಯಾವಳಿ ಯುವ ಜನಾಂಗದ ಮೇಲೆ ಪ್ರಭಾವ ಬೀರುತ್ತಿವೆ. ಪಾಲಕರು, ಶಿಕ್ಷಕರು ಹಾಗೂ ಪೊಲೀಸ್‌ ಇಲಾಖೆ ಈ ಕುರಿತು ಜಾಗೃತಿ ಮೂಡಿಸಬೇಕಿದೆ.

-ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Shivu K
Kshetra Samachara

Kshetra Samachara

23/03/2022 10:05 am

Cinque Terre

35.11 K

Cinque Terre

17

ಸಂಬಂಧಿತ ಸುದ್ದಿ