ಹುಬ್ಬಳ್ಳಿ: ಪತ್ನಿ ಮೇಲೆ ಪತಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಖಂಡನೀಯವಾಗಿದೆ. ಅಪೂರ್ವ ಜೀವನ್ಮರಣ ಹೋರಾಟದಲ್ಲಿದ್ದು ಆಕೆಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು. ಆಕೆಯ ಪತಿಗೆ ಕಠಿಣ ಶಿಕ್ಷೆ ಆಗಬೇಕೆಂದು ಬ್ರಾಹ್ಮಣ ಸಮಾಜದ ಅಧ್ಯಕ್ಷ ಲಕ್ಷ್ಮಣ ಕುಲಕರ್ಣಿ ಒತ್ತಾಯಿಸಿದ್ದಾರೆ.
ಹಿಂದೂ ಧರ್ಮದ ಹೆಣ್ಣುಮಕ್ಕಳು ಲವ್ ಜಿಹಾದ್ ಗೆ ಒಳಪಡುತ್ತಿದ್ದು,ನಾನಾ ಆಮಿಷ ಒಡ್ಡಿ, ಕುಟುಂಬದ ಸದಸ್ಯರಿಗೂ ತಿಳಿಯದಂತೆ ಮದುವೆಯಾಗಿ, ತಮ್ಮ ಧರ್ಮದ ಆಚರಣೆ ಮತ್ತು ಆಹಾರ ಪದ್ಧತಿಗಳನ್ನೆ ಮರೆಯುತ್ತಿದ್ದಾರೆ. ಅಲ್ಲದೇ ಇದರಿಂದಾಗಿ ಮಾನಸಿಕ ಹಾಗೂ ದೈಹಿಕ ಹಿಂಸಾಚಾರ, ದಬ್ಬಾಳಿಕೆಯಿಂದಾಗಿ ಹೆಣ್ಣುಮಕ್ಕಳು ನಲಗುವಂತಾಗಿದೆ.
ಅಪೂರ್ವ ಹೆಸರನ್ನು ಅರ್ಫಾನು ಬಾನು ಎಂದು ಹೆಸರು ಬದಲಾಯಿಸಿದ್ದಲ್ಲದೆ, ಹಲ್ಲೆ ಮಾಡಿದ್ದ ಪತಿ ಇಜಾಜ್ ಶಿರೂರ ಈಗಾಗಲೇ ಮದುವೆಯಾಗಿದ್ದರೂ ಕೂಡಾ 2 ನೇ ಮದುವೆಯಾಗಿದ್ದಾನೆ. ಇದನ್ನು ತಿಳಿದ ಅಪೂರ್ವ ವಿಚ್ಛೇದನಕ್ಕೆ ಮುಂದಾಗಿದ್ದನ್ನು ಸಹಿಸಲಾಗದೇ ಇಜಾಜ್ ಮಾರಣಾಂತಿಕವಾಗಿ ಮನಬಂದಂತೆ ಹಲ್ಲೆ ನಡೆಸಿದ್ದು, ಆತನಿಗೆ ಕಾನೂನಿನಡಿಯಲ್ಲಿ ಯಾವುದೇ ಜಾಮೀನು ಸಿಗದಂತೆ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
Kshetra Samachara
14/03/2022 05:32 pm