ಕುಂದಗೋಳ: ಸ್ವಂತ ಲಾಭಕ್ಕಾಗಿ ಮಟ್ಕಾ ಸಂಖ್ಯೆ ಬರೆಯಿಸಿಕೊಳ್ಳುತ್ತಿದ್ದ ವ್ಯಕ್ತಿಯೋರ್ವನನ್ನು ಕುಂದಗೋಳ ತಾಲೂಕಿನ ದೇವನೂರು ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ. ದಾಳಿ ವೇಳೆ ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ.
ಹೌದು ! ಬಂಧಿತ ಆರೋಪಿ ನಾಗರಾಜ್ ರಾಮಪ್ಪ ಮಾದರ ಎಂದು ತಿಳಿದು ಬಂದಿದ್ದು, ಈತ ಹಾಗೂ ಪರಾರಿಯಾದ ಪರಶುರಾಮ ನಂಜಪ್ಪ ಹಣಬೆ ತಮ್ಮ ಸ್ವಂತ ಲಾಭಕೋಸ್ಕರವಾಗಿ ದೇವನೂರು ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಕಳೆದ ಶುಕ್ರವಾರ ಮಟ್ಕಾ ಸಂಖ್ಯೆ ಬರೆಯಿಸಿ ಕೊಳ್ಳುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕುಂದಗೋಳ ಗ್ರಾಮೀಣ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಹಾಗೂ ಬಂಧಿತನಿಂದ 2,375 ರೂಪಾಯಿ ನಗದು ಹಣ, ಮಟ್ಕಾ ಚೀಟಿ, ಬಾಲ್ ಪೆನ್ ವಶಪಡಿಸಿಕೊಂಡಿದ್ದು, ದಾಳಿ ವೇಳೆ ಇನ್ನೋರ್ವ ಪರಾರಿಯಾಗಿದ್ದಾನೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿ ಪರಾರಿಯಾದ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
Kshetra Samachara
28/02/2022 03:43 pm