ಧಾರವಾಡ: ಜಿಲ್ಲಾಧಿಕಾರಿಗಳ ನಿವಾಸ ಎಂದರೆ ಅಲ್ಲಿ ಪೊಲೀಸ್ ಬಂದೋಬಸ್ತ್ ಇದ್ದೇ ಇರುತ್ತದೆ. ಹೀಗಿರುವಾಗಲೂ ಹೊಂಚು ಹಾಕಿ ಧಾರವಾಡ ಜಿಲ್ಲಾಧಿಕಾರಿಗಳ ನಿವಾಸದಲ್ಲಿನ ಗಂಧದ ಮರಕ್ಕೆ ಚಂದನ ಚೋರರು ಕನ್ನ ಹಾಕಿದ್ದಾರೆ.
ಧಾರವಾಡದಲ್ಲಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಸರ್ಕಾರಿ ಮನೆಯ ಆವರಣದಲ್ಲಿದ್ದ ಸುಮಾರು 8 ವರ್ಷದ ಗಂಧದ ಮರಕ್ಕೆ ಕಳ್ಳರು ಕನ್ನ ಹಾಕಿದ್ದಾರೆ. ಬಂದೋಬಸ್ತ್ ಇದ್ದರೂ ಚಂದನ ಚೋರರು ಒಳನುಗ್ಗಿದ್ದಾದರೂ ಹೇಗೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಕಳ್ಳರು ಮರನ್ನು ಕಟ್ ಮಾಡಿಕೊಂಡು ಹೋಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kshetra Samachara
21/02/2022 01:22 pm