ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಮಹಿಳೆ ಮೇಲೆ ಕೊಡಲಿಯಿಂದ ಹಲ್ಲೆ: ದೂರು ದಾಖಲು

ಹುಬ್ಬಳ್ಳಿ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಮನೆಗೆ ನುಗ್ಗಿ ಮಹಿಳೆಗೆ ಕೊಡಲಿಯಿಂದ ಹೊಡೆದು ಗಾಯಗೊಳಿಸಿ, ಮತ್ತಿಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಕೇಶ್ವಾಪುರ ಮುಕ್ತಿಧಾಮ ಬಳಿಯ ವಿವೇಕಾನಂದ ಕಾಲನಿಯಲ್ಲಿ ಸೋಮವಾರ ನಡೆದಿದೆ.

ರಾಧಾ ಚಂದೊಳ್ಳಿ, ಶಾಂತಮ್ಮ ಚಂದೊಳ್ಳಿ, ಗಂಗಪ್ಪ ಚಂದೊಳ್ಳಿ ಹಲ್ಲೆಗೀಡಾದವರು. ಸುಂಕಪ್ಪ ಕಾಮಜೇನು ಎಂಬ ವ್ಯಕ್ತಿ ಸೇರಿ ಐವರ ವಿರುದ್ಧ ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಂಕಪ್ಪ ಹಾಗೂ ಸಹಚರರು ಚಾಕು, ಕೊಡಲಿ, ಕೋಲು ಹಿಡಿದುಕೊಂಡು ಏಕಾಏಕಿ ಗಂಗಪ್ಪ ಅವರ ಮನೆಗೆ ನುಗ್ಗಿದ್ದರು. ಗೇಟು, ಬಾಗಿಲು, ಕಿಟಕಿ ಒಡೆದು ಗಂಗಪ್ಪ ಅವರಿಗೆ ಕೊಡಲಿಯಿಂದ ಹೊಡೆಯಲು ಮುಂದಾಗಿದ್ದರು. ಬಿಡಿಸಿಕೊಳ್ಳಲು ಬಂದಿದ್ದ ರಾಧಾ ಅವರ ಎಡಗೈಗೆ ಕೊಡಲಿ ಏಟು ಬಿದ್ದಿದೆ. ದೂರು ದಾಖಲಾಗಿದೆ.

Edited By :
Kshetra Samachara

Kshetra Samachara

09/02/2022 08:32 am

Cinque Terre

31.17 K

Cinque Terre

0

ಸಂಬಂಧಿತ ಸುದ್ದಿ