ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೋವಿಡ್ ಪ್ರಮಾಣ ತಗ್ಗಿದ್ದರೂ ಕ್ರೈಂ ಪ್ರಕರಣ ತಗ್ಗುತ್ತಿಲ್ಲ: ಬೇಕಿದೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ...!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಎಷ್ಟು ದೊಡ್ಡದಾಗಿ ಬೆಳೆಯುತ್ತಿದೆಯೋ ಅಷ್ಟೇ ದೊಡ್ಡದಾದ ಮಟ್ಟದಲ್ಲಿ ಕ್ರೈಂ ಪ್ರಕರಣ ಹೆಚ್ಚುತ್ತಲೇ ಇದೆ. ಕ್ಷುಲ್ಲಕ ಕಾರಣಕ್ಕೆ ಕೊಲೆ, ಚಾಕು ಇರಿತ, ಬೈಕ್ ಕಳ್ಳತನ, ದರೋಡೆ ಒಂದು ಕಡೆಯಾದರೇ ಸೈಬರ್ ಕ್ರೈಮ್ ಪ್ರಕರಣ ಹಾವಳಿಯೇ ಮತ್ತೊಂದು ಕಡೆಯಾಗಿದೆ. ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರು ಕ್ರೈಂಗಳಿಗೆ ಮಾತ್ರ ಅಂಕುಶ ಇಲ್ಲದಂತಾಗಿದೆ.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ ಧಾರವಾಡ ಜಿಲ್ಲೆಯಲ್ಲಿಯೂ ಕೂಡ ಕ್ರೈಂ ಪ್ರಕರಣ ಹೆಚ್ಚಾಗುತ್ತಲೆ ಇದೆ. ಈ ಬಗ್ಗೆ ಪೊಲೀಸ್ ಕಮೀಷನರೇಟ್ ಸಾಕಷ್ಟು ನಿರ್ಧಾರವನ್ನು ಕೈಗೊಂಡರೂ ಕೂಡ ಕ್ರೈಂ ಅಟ್ಟಹಾಸ ಮಾತ್ರ ಕಡಿಮೆಯಾಗುತ್ತಿಲ್ಲ. ಅಲ್ಲದೇ ವಿದ್ಯಾವಂತರನ್ನೇ ಹಾಗೂ ಸಾಮಾಜಿಕ ಜಾಲತಾಣದ ವ್ಯಾಮೋಹ ಹೊಂದಿದವರನ್ನೇ ಟಾರ್ಗೆಟ್ ಮಾಡಿ ಒಂದಿಲ್ಲೊಂದು ರೀತಿಯಲ್ಲಿ ಆಮಿಷಗಳನ್ನೊಡ್ಡಿ ಆನ್ ಲೈನ್ ಮೂಲಕ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದಾರೆ. ಈ ಕುರಿತು ಸಾಕಷ್ಟು ಪ್ರಕರಣಗಳು ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾದರೂ ಕೂಡ ಕ್ರೈಂ ಪ್ರಕರಣ ಮಾತ್ರ ತಗ್ಗುತ್ತಿಲ್ಲ. ಆದರೂ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತರು ಮಾತ್ರ ನಾವು ಕ್ರೈಂ ರೇಟ್ ಕಡಿಮೆ ಮಾಡುತ್ತೇವೆ ಎಂದು ಭರವಸೆ ನೀಡುತ್ತಿದ್ದಾರೆ.

ಇನ್ನೂ ಕಿಲ್ಲರ್ ಕೊರೋನಾದ ಮೊದಲ ಅಲೆ ಹಾಗೂ ಎರಡನೇ ಅಲೆಯ ಭೀತಿಯಲ್ಲಿದ್ದ ಜನರಲ್ಲಿ ಮೂರನೆ ಅಲೆಯು ಆತಂಕವನ್ನು ಹುಟ್ಟು ಹಾಕಿತ್ತು. ಆದರೆ ಈಗ ಕೊರೋನಾ ವೈರಸ್ ಪ್ರಕರಣಗಳು ತಗ್ಗಿದ್ದರೂ ಕೂಡ ಕ್ರೈಂ ಪ್ರಕರಣ ಮಾತ್ರ ತಗ್ಗುತ್ತಿಲ್ಲ. ಅಲ್ಲದೇ ದಿನದಿಂದ ದಿನಕ್ಕೆ ಪ್ರಕರಣ ದಾಖಲಾಗುತ್ತಲೇ ಇದೆ. ಆದರೂ ಕೂಡ ಜನರು ಮಾತ್ರ ವಂಚನೆಗೆ ಒಳಗಾಗುವುದು ಮಾತ್ರ ತಪ್ಪುತ್ತಿಲ್ಲ. ಇದೆಲ್ಲದಕ್ಕೂ ಸಾರ್ವಜನಿಕರಿಗೆ ಮಾಹಿತಿ ಹಾಗೂ ತಿಳುವಳಿಕೆ ಕೊರತೆ ಎನ್ನುತ್ತಾರೆ ಪೊಲೀಸ್ ಆಯುಕ್ತರು.

ಒಟ್ಟಿನಲ್ಲಿ ಕೊರೋನಾ ಹಾವಳಿ ತಗ್ಗಿದಂತೆ ಕ್ರೈಂ ಪ್ರಕರಣ ಹಾವಳಿ ತಗ್ಗಬೇಕಾದರೇ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅಲ್ಲದೆ ಸೈಬರ್ ವಂಚನೆಗೆ ಒಳಗಾಗುವ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡಬೇಕಿದೆ.

Edited By : Shivu K
Kshetra Samachara

Kshetra Samachara

30/01/2022 01:53 pm

Cinque Terre

63.17 K

Cinque Terre

2

ಸಂಬಂಧಿತ ಸುದ್ದಿ