ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅಪ್ರಾಪ್ತ ಬಾಲಕಿ ನಾಪತ್ತೆ ! ಪೋಲಿಸರ ತನಿಖೆಯ ಜಾಡು ಅಸ್ಪಷ್ಟತೆ

ಕುಂದಗೋಳ : ತಾಲೂಕಿನ ಕುಂಕೂರು ಗ್ರಾಮದಲ್ಲಿ ಕಳೆದ ಕಳೆದ ಜ.12 ರಂದು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕುಟುಂಬದವರಿಗೆ ಮಾರಕಾಸ್ತ್ರಗಳಿಂದ ಬೆದರಿಸಿ ಮುಸ್ಲಿಂ ಯುವಕ ಅಪರಹರಸಿಕೊಂಡು ಹೋದ ಬಗ್ಗೆ ಪಾಲಕರ ಸಮ್ಮುಖದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರು.

ಇದೀಗ ಪ್ರಕರಣ ದಾಖಲಿಸಿ ಬರೋಬ್ಬರಿ 17 ದಿನ ಕಳೆದರೂ ಪೊಲೀಸ್ ಅಧಿಕಾರಿಗಳಿಂದ ಬಾಲಕಿ ಪತ್ತೆ ಬಗ್ಗೆ ಪ್ರಕರಣದ ಮುಂದಿನ ಅಂಶ ಯಾವುದು ತಿಳಿದು ಬಂದಿಲ್ಲಾ.

ಈ ಬಗ್ಗೆ ಕುಂದಗೋಳ ಗ್ರಾಮೀಣ ಪೊಲೀಸ್ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ರೆ ಹಾರಿಕೆ ಉತ್ತರ ಕೊಡುತ್ತಿದ್ದಾರೆ, ಈ ವಿಷಯದಲ್ಲಿ ಏನು ನಡೀತಾ ? ಇದೆ ಎಂಬುದು ಸ್ಪಷ್ಟವಾಗ್ತಾ ಇಲ್ಲಾ. ಈ ಕಾರಣ ಜಿಲ್ಲೆ ರಾಜ್ಯಾದ್ಯಂತ ಸೇರಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಸತ್ಸಂಗ ಪ್ರಮುಖ ಗುರು ನರೇಂದ್ರ ಆಕ್ರೋಶ ಹೊರಹಾಕಿದ್ದಾರೆ.

ಕುಂದಗೋಳ ತಹಶೀಲ್ದಾರ ಕಚೇರಿ ಆವರಣದಲ್ಲಿ ಪಬ್ಲಿಕ್ ನೆಕ್ಸ್ಟ್ ಉದ್ದೇಶಿಸಿ ಮಾತನಾಡಿದ ಅವರು ತಮ್ಮ ಆಕ್ರೋಶ ಹೊರಹಾಕಿದರು.

Edited By : Nagesh Gaonkar
Kshetra Samachara

Kshetra Samachara

29/01/2022 05:14 pm

Cinque Terre

98.68 K

Cinque Terre

2

ಸಂಬಂಧಿತ ಸುದ್ದಿ