ಕುಂದಗೋಳ : ಕೇಳ್ರಪ್ಪೋ ಕೇಳ್ರಿ ಬಸ್'ನ್ಯಾಗ ಓಡಾಡೋರು, ಬಸ್ ನಿಲ್ದಾಣದಾಗ ಕೂರೋರು, ಬ್ಯಾಂಕ್'ನ್ಯಾಗ ಹಣ ತೆಗೆದುಕೊಂಡು ಬರೋರು ಒಟ್ಟಾರೆ ನಿಮ್ಮ ಕೈ ಜೇಬಿನಲ್ಲಿ ಹಣ ಇದ್ರೇ ... ನೀವೂ ಹುಷಾರ್ ಹುಷಾರ್ ಹುಷಾರ್.
ಯಾಕ್ರೀ ಏನಾಯ್ತು ಅಂತಿರೇನು ? ನಿಮ್ಮ ಊರು ಕುಂದಗೋಳ ಪಟ್ಟಣದಾಗ ಹಗಲು ಕಳ್ಳರ ಹಾವಳಿ ಹೆಚ್ಚಾಗಿದೆ, ನಿಮ್ಮ ಜೇಬಿನಲ್ಲಿ ಹಣ ಇದ್ರೇ ಅದು ಕಳ್ಳರು ಪಾಲಾಗೋ ಮೊದಲೇ ಎಚ್ಚರ ವಹಿಸಿ.
ಯಾಕಂದ್ರೆ, ಇವತ್ತು ಒಬ್ಬ ವ್ಯಕ್ತಿ ಬ್ಯಾಂಕ್'ನಲ್ಲಿ ಹಣ ತೆಗೆದುಕೊಂಡು ಪಾಪಾ ಲ್ಯಾಪ್ ಟ್ಯಾಪ್ ತಂದ್ರ ಆಯ್ತು ಅಂತ್, ಹುಬ್ಬಳ್ಳಿ ಲಕ್ಷ್ಮೇಶ್ವರ ಬಸ್ ಹತ್ತಿ ಕುಂದಗೋಳದಿಂದಾ ಹುಬ್ಬಳ್ಳಿ ಹೋಗುವಾಗ ಇಲ್ಲೇ ತಾಲೂಕು ಆಸ್ಪತ್ರೆ ಕಡೆ ಆತನ ಜೇಬಿನಲ್ಲಿನ 16.000 ರೂಪಾಯಿ ಹಣವನ್ನು ಕಳ್ಳರು ಎಗರಿಸಿದ್ದಾರೆ.
ಹಣ ಕಳೆದುಕೊಂಡ ವ್ಯಕ್ತಿ ಶಿರೂರು ಗ್ರಾಮದನಾಗಿದ್ದು, ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾರೆ, ಒಟ್ಟಾರೆ ಸಾರಿಗೆ ಬಸ್ ನಿಲ್ದಾಣ ಹಾಗೂ ಇನ್ನುಳಿದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಪೊಲೀಸರು ಗಸ್ತು ತಿರುಗಾಟ ಹೆಚ್ಚಿಸುವಂತೆ ಜನರು ಒತ್ತಾಯ ಮಾಡುತ್ತಿದ್ದಾರೆ.
Kshetra Samachara
27/01/2022 02:56 pm