ಹುಬ್ಬಳ್ಳಿ: ಕಳೆದದೊಂದು ವಾರದಿಂದ ಹುಬ್ಬಳ್ಳಿಯ ಕೈ ಮುಖಂಡರ ಮಧ್ಯೆ ನಡೆಯುತ್ತಿದ್ದ ಕ್ಯಾಸಿನೋ ಕಿರಿಕ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಧ್ಯ ಪತಿಯ ವಿರುದ್ದವೇ ಪತ್ನಿ ದೂರು ನೀಡಿದ್ದ ದೂರನ್ನು ಪೊಲೀಸರಿ ಎಫ್ ಐ ಆರ್ ದಾಖಲಿಸಿದ್ದರು. ಹೀಗಾಗೇ ಕೈ ಮುಖಂಡ ಗಿರೀಶ್ ಗೆ ಮತ್ತೊಂದು ಸಂಕಷ್ಟ ಶುರುವಾಗಿದೆ.
ಛೋಟಾ ಮುಂಬಯಿ ಹುಬ್ಬಳ್ಳಿಯಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿರುವ ಕ್ಯಾಶಿನೋ ವಿಚಾರವಾಗಿ ಗಲಾಟೆ ನಡೆಯುತ್ತಲೇ ಇದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ ಟಿಕೆಟ್ ಆಕಾಂಕ್ಷಿಯಾಗಿರುವ ಗಿರೀಶ್ ಗದಿಗೆಪ್ಪಗೌಡರ್ ಮತ್ತು ಇನ್ನಿತರ ಕೈ ಮುಖಂಡತ ಮಧ್ಯೆ ಆರೋಪ ಪ್ರತ್ಯಾರೋಪ ನಡೆಯುತ್ತಲೇ ಇತ್ತು. ಆದರೆ ಅದಕ್ಕೆ ಈಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಗಿರೀಶ್ ವಿರುದ್ದ ಆತನ ಪತ್ನಿಯ ಗಂಭೀರ ಆರೋಪ ಮಾಡಿದ್ದಾಗ. ತನ್ನ ಪತಿ ಹಾಗೂ ಕುಟುಂಬಸ್ಥರು ತನ್ನ ಹತ್ಯೆಗೆ ಯತ್ನಿಸಿದ್ದಾರೆ ಎನ್ನೋ ಅರೋಪ ಮಾಡಿದ್ದಳು. ಅದು ಗಂಡನ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಗಿರೀಶ್ ಗದಿಗೆಪ್ಪಗೌಡರ್ ಈ ರೀತಿ ಮಾಡ್ತಿದ್ದು, ಆತನಿಗೆ ಕ್ಯಾಶಿನೋ ವ್ಯವಹಾರ,ಡ್ರಗ್ಸ್ ಪೆಡ್ಲರ್ ಗಳ ನಂಟಿದೆ ಅಂತ ಪತ್ನಿಯೇ ಪತಿಯ ವಿರುದ್ದ ಆರೋಪಿಸುತ್ತಿದ್ದಳು.
ಅಲ್ಲದೆ ಕೆಲ ಕೊಲೆ ಯತ್ನದ ವಿಡಿಯೋವನ್ನ ಕೂಡಾ ಬಿಡುಗಡೆ ಮಾಡಿ ಪತಿಯ ಮುಖವಾಡವನ್ನೆ ಬಯಲು ಮಾಡಿದ್ದಳು. ತಮ್ಮ ಹಣಕಾಸಿನ ವಿಚಾರದಲ್ಲಿ ನನ್ನನ್ನ ಎಳೆದು ತಂದಿದ್ದಾರೆ, ಅಲ್ಲದೆ ಸಧ್ಯ ನಂಗೆ ಡಿವೋಸ್೯ ನೋಟಿಸ್ ಸಹಿತ ನೀಡಿದ್ದಾರೆ. ನಾನು ನನ್ನ ತಾಯಿ ಮನೆಯಲ್ಲಿದ್ದು ನಂಗೆ ರಕ್ಷಣೆ ನೀಡಬೇಕು ಎಂದು ಅಂತ ಮನವಿ ಮಾಡಿದ್ದಳು ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಕೂಡಾ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಸದ್ಯ ಪೊಲೀಸ್ ಇಲಾಖೆ ಕೈ ಮುಂಖಡ ಸೇರಿದಂತೆ ಆರು ಜನರ ವಿರುದ್ದ ದೂರು ದಾಖಲಿಸಿಕೊಂಡಿದೆ.
ಒಟ್ಟಿನಲ್ಲಿ ಸಿದ್ದರಾಮಯ್ಯ, ಸೇರಿದಂತೆ ಇನ್ನಿತರ ಮುಖಂಡರ ಜೊತೆ ಒಡನಾಟವಿದೆ ಅಂತ ಬಿಂಬಿಸಿಕೊಳ್ಳುತ್ತಿದ್ದ ಗಿರೀಶ್ ಮುಖವಾಡ ಬಯಲಾಗಿದೆ. ಇತ್ತ ಪತ್ನಿಯೇ ಆರೋಪ ಮಾಡುತ್ತಿದ್ದಂತೆಯೇ ಗಿರೀಶ್ ಕಾಲುಕಿತ್ತಿದ್ದಾನೆ. ಸದ್ಯ ಪ್ರಕರಣ ತನಿಖೆ ನಡೆಸುತ್ತಿರುವ ಖಾಕಿ ಪಡೆ ಗಿರೀಶ್ ನ ಅಸಲಿಯತ್ತನ್ನು ಅದ್ಯಾವ ರೀತಿಯಲ್ಲಿ ಬಿಚ್ಚಿಡ್ತಾರೆ ಎನ್ನುವುದನ್ನು ಕಾದು ನೋಡಬೇಕು.
Kshetra Samachara
24/01/2022 02:39 pm