ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಹಿಳೆಯ ಬಟ್ಟೆ ಹರಿದು ಹಲ್ಲೆ: ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಹುಬ್ಬಳ್ಳಿ: ಮಗನೊಂದಿಗೆ ಕೆಲವರು ಜಗಳ ಮಾಡುತ್ತಿದ್ದುದನ್ನು ತಪ್ಪಿಸಲು ಮುಂದಾದ ಮಹಿಳೆಯ ಬಟ್ಟೆ ಜಗ್ಗಿ ಹರಿದು, ಹಲ್ಲೆ ನಡೆಸಿದ ಘಟನೆ ನವನಗರದ ಪಂಚಾಕ್ಷರಿ ನಗರದಲ್ಲಿ ಇತ್ತೀಚೆಗೆ ನಡೆದಿದೆ.

ಮಹಿಳೆಯೊಬ್ಬರು ಮಗ ಆಕಾಶ ಹಾಗೂ ಇತರರೊಂದಿಗೆ ಜ.14ರಂದು ರಾತ್ರಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಆಕೆಯ ಮಗ ಆಕಾಶ್‌ಗೆ, ಶ್ರೇಯಸ್‌ ಚಿಂದಿ ಎಂಬಾತ ಕರೆ ಮಾಡಿದ್ದ. “ನೀನು ನವನಗರಕ್ಕೆ ಡಾನ್ ಅದಿ ಏನಲೇ' ಎಂದು ಕೇಳಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಬಳಿಕ ಸಹಚರರೊಂದಿಗೆ ಆಕಾಶ್ ಇದ್ದ ಸ್ಥಳಕ್ಕೆ ಬಂದು ಜಗಳ ತೆಗೆದು, ಹಲ್ಲೆಗೆ ಮುಂದಾಗಿದ್ದ. ಜಗಳ ಬಿಡಿಸಲು ಮುಂದಾದ ಮಹಿಳೆಯ ಬಟ್ಟೆ ಹರಿದು, ಜೀವ ಬೆದರಿಕೆ ಹಾಕಿದ್ದಾರೆಂದು ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

17/01/2022 11:52 am

Cinque Terre

30.83 K

Cinque Terre

1

ಸಂಬಂಧಿತ ಸುದ್ದಿ