ಹುಬ್ಬಳ್ಳಿ: ತಾಯಮ್ಮ ವೆಜಿಟೇಬಲ್ ಅಗ್ರೋ ನರ್ಸರಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಲಕ್ಷಾಂತರ ರೂಪಾಯಿ ಹಾನಿಯಾದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ತಡಸ ಕ್ರಾಸ್ ಬಳಿ ನಡೆದಿದೆ.
ಹುಬ್ಬಳ್ಳಿಯ ನಿವಾಸಿ ಮಂಜುನಾಥ ಶ್ರೀನಿವಾಸ ಮುತ್ತುಗರ ಎಂಬುವರಿಗೆ ಸೇರಿದ ನರ್ಸರಿ ಇದಾಗಿದೆ. ಇನ್ನು ಯಾವ ಕಾರಣದಿಂದಾಗಿ ಈ ದುರ್ಘಟನೆ ನಡೆದಿದೆ ಎಂಬುದು ತಿಳಿದು ಬಂದಿಲ್ಲ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Kshetra Samachara
15/01/2022 10:00 am