ಹುಬ್ಬಳ್ಳಿ: ಬ್ಯಾಂಕ್ ಖಾತೆಯ ಕೆವೈಸಿ ಅಪ್ಡೇಟ್ ಮಾಡಬೇಕು ಎಂದು ನಂಬಿಸಿ 38 ಸಾವಿರ ರೂ. ವಂಚಿಸಿದ ನಗರದ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಉಣಕಲ್ ಗ್ರಾಮದ ಓಂ ನಗರದ ಅನಂತಪ್ರೇಮ್ ನಿವಾಸಿ ಸಚಿನ್ ಮಿರಜಕರ್ ಹಣ ಕಳೆದುಕೊಂಡವರು. ಸಚಿನ್ ಅವರಿಗೆ ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ಅಪ್ಡೇಟ್ ಮಾಡಬೇಕು ಎಂಬ ಸಂದೇಶ ಬಂದಿತ್ತು. ಆ ಮೆಸೇಜ್‌ನಲ್ಲಿದ್ದ ನಂಬರ್‌ಗೆ ಸಚಿನ್ ಕರೆ ಮಾಡಿ ಎಂದಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿ ಮಾತನಾಡಿ ನಿಮ್ಮ ಖಾತೆ ಸ್ಥಗಿತವಾಗುತ್ತದೆ ಅಪಡೆಟ್ ಮಾಡಬೇಕು ಆದರಿಂದ ಬ್ಯಾಂಕ್ ಖಾತೆ ಹೆಸರು, ಡೆಬಿಟ್ ಕಾರ್ಡ್ ಮತ್ತು ಓಟಿಪಿ ಸಂಖ್ಯೆ ಪಡೆದುಕೊಂಡಿದ್ದಾನೆ. ನಂತರ ತನ್ನ ಮೊಬೈಲ್ ನಂಬರ್ ಪರಿವರ್ತಿಸಿ ಸಚಿನ ಅವರ ಖಾತೆಯಿಂದ ಹಣವನ್ನು ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ.
Kshetra Samachara
08/01/2022 09:59 pm