ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಲಸದ ಆಮಿಷವೊಡ್ಡಿ ವಂಚನೆ: ವಾಣಿಜ್ಯನಗರಿಯಲ್ಲಿ ನಿಲ್ಲದ ಸೈಬರ್ ಕ್ರೈಮ್

ಹುಬ್ಬಳ್ಳಿ: ಕೆಲಸಕ್ಕಾಗಿ ಡಾಟ್ ಕಾಂ ಒಂದರಲ್ಲಿ ನೋಂದಣಿ ಮಾಡಿಕೊಂಡಿದ್ದ ಯುವಕನಿಗೆ ಕರೆ ಮಾಡಿದ ಅಪರಿಚಿತರು ಸಂದರ್ಶನ ನಡೆಸಿ ನೀವು ಕೆಲಸಕ್ಕೆ ಆಯ್ಕೆಯಾಗಿದ್ದೀರಿ ಎಂದು ವಿವಿಧ ಶುಲ್ಕದ ನೆಪದಲ್ಲಿ 43,050 ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್‌ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ಷಯ ಪಾರ್ಕ್‌ನ ಸಾಂಕೇತ ಪಾಂಡುರಂಗಿ ಎಂಬುವರು ನೌಕರಿ ಡಾಟ್ ಕಾಮ್‌ನಲ್ಲಿ ಉದ್ಯೋಗಕ್ಕಾಗಿ ನೋಂದಣಿ ಮಾಡಿಕೊಂಡಿದ್ದರು. ಆ ಮಾಹಿತಿಯನ್ನು ಬಳಸಿಕೊಂಡು “ನೀವು ರಿಲಯನ್ಸ್ ಜಿಯೋ ಇನ್ಫೋಕಾಮ್' ಕೆಲಸದ ಫೈನಲ್‌ ಲಿಸ್ಟ್‌ನಲ್ಲಿದ್ದೀರಿ ಎಂದು ಅಪರಿಚಿತರು ಸಂದೇಶ ಕಳುಹಿಸಿದ್ದರು.

ಬಳಿಕ ಆನ್‌ಲೈನ್ ಮೂಲಕ ಸಂದರ್ಶನ ನಡೆಸಿ ಆಫರ್ ಲೆಟರ್ ಸಹ ಕಳುಹಿಸಿದ್ದರು. ನಂತರ ಡೆಪಾಸಿಟ್, ಸ್ಯಾಲರಿ ಅಕೌಂಟ್ ಶುಲ್ಕ, ಇನ್ಸೂರೆನ್ಸ್ ಮತ್ತಿತರ ಶುಲ್ಕದ ನೆಪದಲ್ಲಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆಂದು ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

25/11/2021 10:49 am

Cinque Terre

32.37 K

Cinque Terre

1

ಸಂಬಂಧಿತ ಸುದ್ದಿ