ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯನ್ನೇ ಕೇಂದ್ರ ಸ್ಥಾನವನ್ನಾಗಿಸಿಕೊಂಡ ಗಾಂಜಾ ಘಾಟು:ಬೀಚ್ ಗಳಿಗೆ ಇಲ್ಲಿಂದಲೇ ರವಾನೆ...?

ಹುಬ್ಬಳ್ಳಿ: ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ದಿನದಿಂದ ದಿನಕ್ಕೆ ಗಾಂಜಾ ಘಾಟು ಹೆಚ್ಚುತ್ತಿದೆ. ಅಲ್ಲದೇ ಎಲ್ಲೆಂದರಲ್ಲಿ ದಂ ಮಾರೋ ದಂ ಅಡ್ಡಗಳು ತಲೆ ಎತ್ತುತ್ತಿವೆ. ಅಲ್ಲದೇ ಗಾಂಜಾ ವಹಿವಾಟಿಗೆ ಹುಬ್ಬಳ್ಳಿಯೇ‌ ಕೇಂದ್ರ ಸ್ಥಾನ ಎಂಬುವಂತ ಸ್ಪೋಟಕ ಮಾಹಿತಿಯೊಂದು ಲಭ್ಯವಾಗಿದೆ.

ಗೋವಾ, ಕಾರವಾರ, ಓಂ ಬೀಚ್‌ಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಿಂದಲೇ ಸರಬರಾಜು ಮಾಡಲಾಗುತ್ತಿದೆ. ಹತ್ತು ತಿಂಗಳಲ್ಲಿ 42 ಎನ್‌ಡಿಪಿಎಸ್‌ ಪ್ರಕರಣಗಳು ದಾಖಲಾಗಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿ ಹೆಸರಿಗೆ ಮಸಿ ಬಳಿಯಲು ಗಾಂಜಾ ದರೋಡೆಕೋರರು ಹುಬ್ಬಳ್ಳಿಯನ್ನೆ ಅಡ್ಡೆಯನ್ನಾಗಿಸಿಕೊಂಡಿದ್ದಾರೆ.

ವಾಣಿಜ್ಯ ಚಟುವಟಿಕೆಗಳ ನೆಪದಲ್ಲಿ ಪಕ್ಕದ ರಾಜ್ಯಗಳಿಂದ ಇಲ್ಲಿಗೆ ಗಾಂಜಾ ತಂದು ಮಧ್ಯವರ್ತಿಗಳ ಮೂಲಕ ಗೋವಾ, ಕಾರವಾರ, ಓಂ ಬೀಚಗಳಿಗೆ ರವಾನೆ ಮಾಡುತ್ತಿದ್ದಾರೆ. ಕಳೆದ ವರ್ಷ 2020 ರಲ್ಲಿ 24 ಹಾಗೂ 2019 ರಲ್ಲಿ 16 ಪ್ರಕರಣಗಳು ದಾಖಲಾಗಿದ್ದವು. ಆದರೆ ಈ ವರ್ಷ ಹತ್ತೆ ತಿಂಗಳಲ್ಲಿ 42 ಪ್ರಕರಣಗಳು ಎನ್‌ಡಿಪಿಎಸ್‌ ನಲ್ಲಿ (ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ) ದಾಖಲಾಗಿವೆ.

ಕೆಜಿ, ಐದು ಕೆಜಿ, ಹತ್ತು ಕೆಜಿ ಬಂಡಲಗಳಲ್ಲಿ ಗಾಂಜಾ ಸುತ್ತಿಕೊಳ್ಳುತ್ತಾರೆ. ಇದಕ್ಕೆ ಸುಗಂಧ ದ್ರವ್ಯ ಹಾಕಿಕೊಂಡು ಯಾರಿಗೂ ಸಂಶಯ ಬಾರದಂತೆ ಬ್ಯಾಗಿನಲ್ಲಿಟ್ಟುಕೊಂಡು ಪ್ರಯಾಣಿಕರ ಸೋಗಿನಲ್ಲಿ ಹುಬ್ಬಳ್ಳಿಗೆ ಬಂದಿಳಿಯುತ್ತಾರೆ. ಮೊದಲೇ ನಿಗದಿಪಡಿಸಿದ ಮಧ್ಯವರ್ತಿಗಳಿಗೆ ಕೊಟ್ಟು ಕಾಲು ಕೀಳುತ್ತಾರೆ. ಹೀಗೆ ಗಾಂಜಾ ಖರೀದಿಸಿದ ಸ್ಥಳೀಯ ಮಧ್ಯವರ್ತಿಗಳು ಕಾರವಾರ, ಗೋವಾ, ಗೋಕರ್ಣದ ಓಂ ಬೀಚ್‌ ಸೇರಿದಂತೆ ಮತ್ತಿತರ ಪ್ರದೇಶಗಳಿಗೆ ರವಾನಿಸುತ್ತಾರೆ.ವಿದೇಶಿಯರು ಸಮುದ್ರ ದಡಕ್ಕೆ ಬರುವುದರಿಂದ ನಶಾ ಪದಾರ್ಥಗಳಿಗೆ ಬೇಡಿಕೆ ಹೆಚ್ಚಿದ್ದು, ಇದೇ ಕಾರಣಕ್ಕೆ ಹುಬ್ಬಳ್ಳಿಯಿಂದ ವ್ಯವಸ್ಥಿತವಾಗಿ ಗಾಂಜಾ ಸಪ್ಲೈ ಆಗುತ್ತಿದೆ.

Edited By : Shivu K
Kshetra Samachara

Kshetra Samachara

12/11/2021 02:27 pm

Cinque Terre

39.33 K

Cinque Terre

2

ಸಂಬಂಧಿತ ಸುದ್ದಿ