ಹುಬ್ಬಳ್ಳಿ: ಗೋಧಿ ಹಿಟ್ಟು ಖರೀದಿ ನೆಪದಲ್ಲಿ 59,075ರೂ.ವರ್ಗಾಯಿಸಿಕೊಂಡು ವಂಚಿಸಿದ ಘಟನೆಯೊಂದು ನಡೆದಿದೆ.
ಧಾರವಾಡ ನಾರಾಯಣಪುರದ ಶ್ರೀಶೈಲ ಬಲ್ಲೂರಗೆ ಅಪರಿಚಿತನೊಬ್ಬ ಕರೆ ಮಾಡಿದ್ದ. 'ತಾನು ಆರ್ಮಿ ಕಚೇರಿಯಿಂದ ಮಾತನಾಡುತ್ತಿದ್ದೇನೆ, ಎನ್‌ಎಸ್‌ಎಸ್ ಕ್ಯಾಂಪ್‌ಗೆ 22 ಚೀಲ ಗೋಧಿ ಹಿಟ್ಟು ಬೇಕಿದೆ' ಎಂದು ತಿಳಿಸಿ ವಿಳಾಸವೊಂದನ್ನು ನೀಡಿದ್ದ. ಬಳಿಕ ಮತ್ತೊಬ್ಬ ಕರೆ ಮಾಡಿ, ಗೋಧಿ ಹಿಟ್ಟಿನ ಹಣ ಪಾವತಿಸುತ್ತೇನೆಂದು ಫೋನ್ ಪೇ ನಂಬರ್ ಪಡೆದಿದ್ದ. ವಾಟ್ಸ್ ಆ್ಯಪ್‌ಗೆ ಕ್ಯೂಆರ್ ಕೋಡ್ ಕಳುಹಿಸಿ ಸ್ಕ್ಯಾನ್ ಮಾಡಿ ಯುಪಿಐ ಪಿನ್ ಹಾಕುವಂತೆ ತಿಳಿಸಿದ್ದ. ಅವನ ಮಾತು ನಂಬಿ ಮುಂದುವರಿದಾಗ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆಂದು ಹು-ಧಾ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
12/11/2021 09:08 am