ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ದಂಧೆ! ದಾಳಿ ಮಾಡಿದ ಪೊಲೀಸ್

ಹುಬ್ಬಳ್ಳಿ : ನಗರದ ಹಳೇ ಹುಬ್ಬಳ್ಳಿ ಸದಾಶಿವನಗರದಲ್ಲಿ ಗೃಹ ಬಳಕೆಯ ಸಿಲಿಂಡರ್ ನಿಂದ ಆಟೋ ರಿಕ್ಷಾಗಳಿಗೆ ಬಳಸುವ ಸಣ್ಣ ಸಿಲಿಂಡರ್ ಗಳಿಗೆ ಗ್ಯಾಸ್ ರಿಫಿಲ್ಲಿಂಗ್ ಮಾಡುತ್ತಿದ್ದ ಅಡ್ಡೆ ಮೇಲೆ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಆರೋಪಿತರಿಂದ 19 ಸಾವಿರ ರೂ . ಮೌಲ್ಯದ 4 ಸಿಲಿಂಡರ್ ಗಳು ಹಾಗೂ 2 ತೂಕದ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಮನೋಜ ಹಾಗೂ ಸುಶೀಲಕುಮಾರ ಆರೋಪಿಗಳು, ತಗಡಿನ ಶೆಡ್ ನಲ್ಲಿ ಗ್ಯಾಸ್ ಬಂಧಿತ ಕನ್ವರ್ಟರ್ ಮತ್ತು ಪೈಪ್ ಮೂಲಕ ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ದಂಧೆ ಮಾಡುತ್ತಿದ್ದರು. ಈ ವೇಳೆ ಹಳೇ ಹುಬ್ಬಳ್ಳಿ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

10/11/2021 04:24 pm

Cinque Terre

23.87 K

Cinque Terre

1

ಸಂಬಂಧಿತ ಸುದ್ದಿ