ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ವಾರಿ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು: ಬ್ಯಾಹಟ್ಟಿ ಗ್ರಾಮದಲ್ಲಿ ಘಟನೆ

ಹುಬ್ಬಳ್ಳಿ: ಕ್ವಾರಿಯಲ್ಲಿ ನಿರ್ಮಾಣವಾಗಿರುವ ಕೆರೆಯಲ್ಲಿ ಈಜಲು ಹೊಲದಲ್ಲಿದ್ದ ಯಾರೋ ಗಮನಿಸಿ ಧಾವಿಸಿದರು. ಅಷ್ಟರಲ್ಲಿ ಹೋಗಿದ್ದ ಮಕ್ಕಳಿಬ್ಬರು ಮುಳುಗಿ ಮೃತಪಟ್ಟ ದಾರುಣ ಘಟನೆ ತಾಲೂಕಿನ ಬ್ಯಾಹಟ್ಟಿಯಲ್ಲಿ ಸಂಜೆ ಸಂಭವಿಸಿದೆ.

ಹರೀಶ ಶಿವಳ್ಳಿಗೌಡರ (7) ಹಾಗೂ ಗೌತಮ್ ಶಿವಳ್ಳಿಗೌಡರ (12) ಮೃತಪಟ್ಟ ಸಹೋದರರು. ಮನೆಯಿಂದ ಸ್ವಲ್ಪ ದೂರದಲ್ಲಿ ಇರುವ ಮಣ್ಣಿನ ಕ್ವಾರಿಗೆ ಮೂವರು ಮಕ್ಕಳು ಈಜಲು ತೆರಳಿದ್ದರು.

ಕ್ವಾರಿಯಲ್ಲಿ ಹತ್ತಾರು ಅಡಿಗಳಷ್ಟು ನೀರಿದೆ ಎಂದು ಹೇಳಲಾಗಿದೆ. ಈಜಲು ಬಾರದ ಮಕ್ಕಳು ಅರಿವಿಲ್ಲದೆ ಕೆರೆಯಲ್ಲಿ ದಂಡೆ ಬಳಿಯಿಂದ ಮುಂದಕ್ಕೆ ಹೋಗಿ ಮುಳುಗೇಳತೊಡಿಗಿದ್ದರು. ಇದನ್ನು ಸಮೀಪದ ಹೊಲದಲ್ಲಿದ್ದ ಯಾರೋ ಒಬ್ಬರು ನೋಡಿದ್ದಾರೆ.

ಮುಳುಗಿಹೋಗಿದ್ದ ಮಕ್ಕಳಲ್ಲಿ ಒಬ್ಬನನ್ನು ಮಾತ್ರ ಮೇಲೆತ್ತಲು ಸಾಧ್ಯವಾಯಿತು. ನೀರು ಕುಡಿದು ಅಸ್ವಸ್ಥಗೊಂಡಿರುವ ಬಾಲಕನನ್ನು ಇಲ್ಲಿಯ ಕಿಮ್ಸ್‌ಗೆ ಕರೆತಂದು ದಾಖಲಿಸಲಾಗಿದೆ.

ಸ್ಥಳೀಯರ ಮಾಹಿತಿ ಮೇರೆಗೆ ಗ್ರಾಮೀಣ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮಸ್ಥರು ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದು, ಮೃತಪಟ್ಟ ಇಬ್ಬರ ದೇಹವನ್ನೂ ರಾತ್ರಿ ಪತ್ತೆ ಮಾಡಲಾಯಿತು. ಮಕ್ಕಳ ಪಾಲಕರು ಮತ್ತು ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

07/11/2021 12:42 pm

Cinque Terre

82.65 K

Cinque Terre

8

ಸಂಬಂಧಿತ ಸುದ್ದಿ