ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಫೇಸ್‌ಬುಕ್‌ ಪರಿಚಯ- ಉಡುಗೊರೆ ನೆಪದಲ್ಲಿ 4.49 ಲಕ್ಷ ರೂ. ವಂಚನೆ

ಹುಬ್ಬಳ್ಳಿ: ಫೇಸ್‌ಬುಕ್‌ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಧಾರವಾಡದ ರಾಮನಗರ ನಿವಾಸಿ ರಾಜಶೇಖರ ನವಲೂರ ಅವರಿಗೆ ಲಂಡನ್‌ನಿಂದ ಉಡುಗೊರೆ ಕಳುಹಿಸಿರುವುದಾಗಿ ನಂಬಿಸಿ, ಅವರಿಂದ 4.49 ಲಕ್ಷ ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾನೆ.

ರಾಜಶೇಖರ ಅವರ ತಾಯಿಯ ಫೇಸ್‌ಬುಕ್‌ ಖಾತೆಯಿಂದ ಪರಿಚಯವಾದ ವ್ಯಕ್ತಿ, ಲಂಡನ್‌ನಿಂದ ಗಿಫ್ಟ್‌ ಬಂದಿದೆ ಎಂದು ನಂಬಿಸಿದ್ದಾನೆ. ವಿದೇಶಿ ಹಣ ಭಾರತದ ರೂಪಾಯಿಗೆ ಬದಲಾಯಿಸಲು, ತೆರಿಗೆ ಹಾಗೂ ಇತರ ಶುಲ್ಕವೆಂದು ಹಂತಹಂತವಾಗಿ ಬ್ಯಾಂಕ್‌ ಖಾತೆ, ಫೋನ್‌ ಪೇ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

04/11/2021 01:57 pm

Cinque Terre

23.5 K

Cinque Terre

3

ಸಂಬಂಧಿತ ಸುದ್ದಿ