ಹುಬ್ಬಳ್ಳಿ: ಹೆತ್ತ ತಾಯಿಯೇ ತನ್ನ ಪ್ರೀಯಕರನೊಂದಿಗೆ ಸೇರಿ ಮಗಳ ಅಶ್ಲೀಲ ಚಿತ್ರವನ್ನು ಸೆರೆಹಿಡಿದು ಹಲ್ಲೆ ಮಾಡಿ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿದ ಮಗಳು ಪೊಲೀಸ್ ಠಾಣೆ ಮೆಟ್ಟಿಲು ಏರಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಹೌದು.. ಸಂಬಂಧಿಯೊಬ್ಬ ನನ್ನ ತಾಯಿಯ ಅಶ್ಲೀಲ ಚಿತ್ರಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಬಳಿಕ ನನ್ನ ತಾಯಿಯೂ ಆತನೊಂದಿಗೆ ಸೇರಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ' ಎಂದು ಆರೋಪಿಸಿ ಹಳೇಹುಬ್ಬಳ್ಳಿ ಅಜೀರ ನಗರದ 20 ವರ್ಷದ ಯುವತಿಯೊಬ್ಬಳು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
ಹಳೇ ಹುಬ್ಬಳ್ಳಿ ನಿವಾಸಿ ಮಹ್ಮದಗೌಸ್ ಕರ್ಜಗಿ ಹಾಗೂ ಯುವತಿಯ ತಾಯಿ ಫರ್ಜಾನಾ ಹಲ್ಲೆ ನಡೆಸಿದ ಆರೋಪಿಗಳು.
ಘಟನೆ ವಿವರ: ಯುವತಿ ತನ್ನ ತಾಯಿಯೊಂದಿಗೆ ಬೆಳಗಾವಿಯಲ್ಲಿದ್ದರು. ಕಡಿಮೆ ಖರ್ಚಿನಲ್ಲಿ ಶಿಕ್ಷಣ ಕೊಡಿಸುವುದಾಗಿ ಪುಸಲಾಯಿಸಿ ಆಕೆಯ ದೊಡ್ಡಮ್ಮನ ಮಗ ಮಹ್ಮದಗೌಸ್‌ನು ತಾಯಿ- ಮಗಳನ್ನು ಹುಬ್ಬಳ್ಳಿಗೆ ಕರೆದುಕೊಂಡು ಬಂದಿದ್ದ. ಬಳಿಕ ಹೇಗೋ ಆಕೆಯ ತಾಯಿಯ ಅಶ್ಲೀಲ ಚಿತ್ರಗಳನ್ನು ಚಿತ್ರೀಕರಿಸಿ ಬೆದರಿಸಿ, ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ. ಇವರಿಬ್ಬರ ವರ್ತನೆಯಿಂದ ಯುವತಿ ನೊಂದಿದ್ದಳು. ಈ ನಡುವೆ ಯುವತಿಗೆ ಬೇರೊಬ್ಬ ಯುವಕನೊಂದಿಗೆ ಮದುವೆ ನಿಗದಿಯಾಗಿತ್ತು.
ಈ ವಿಷಯ ತಿಳಿದ ಮಹ್ಮದಗೌಸ್ “ಎಂಗೇಜ್‌ಮೆಂಟ್ ಆಗಿರುವ ಯುವಕನ ಕಡೆಯಿಂದ 5 ಲಕ್ಷ ರೂ. ತೆಗೆದುಕೊಂಡು ಬಾ. ಇಲ್ಲದಿದ್ದರೆ ನಿನ್ನ ಅಶ್ಲೀಲ ಚಿತ್ರವೂ ನನ್ನ ಬಳಿ ಇದೆ. ಅದನ್ನು ಮದುಮಗನಿಗೆ ಹಾಗೂ ಅವರ ಸಂಬಂಧಿಕರಿಗೆ ಕಳುಹಿಸುತ್ತೇನೆ' ಎಂದು ಬೆದರಿಕೆ ಹಾಕಿದ್ದನು.
ಮಹ್ಮದಗೌಸ್ ಮತ್ತು ತನ್ನ ತಾಯಿಯ ಸಂಬಂಧದ ವಿಚಾರವನ್ನು ಯುವತಿಯು ಅಜ್ಜಿ ಹಾಗೂ ದುಬೈದಲ್ಲಿರುವ ತಂದೆಗೆ ತಿಳಿಸಿದ್ದರು. ಇದರಿಂದ ಆಕ್ರೋಶಗೊಂಡ ಮಹ್ಮದಗೌಸ್ ಹಾಗೂ ಫರ್ಜಾನಾ ಇಬ್ಬರೂ ಸೆ. 29ರಂದು ಯುವತಿ ಜತೆ ಜಗಳ ತೆಗೆದಿದ್ದರು. ತನ್ನ ಚಿನ್ನದ ಸರ ಹಾಗೂ ಉಂಗುರ ಕಿತ್ತುಕೊಂಡು, ಬಟ್ಟೆ ಹರಿದು ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಯುವತಿ ದೂರಿನಲ್ಲಿ ಹೇಳಿಕೊಂಡಿದ್ದಾಳೆ.
Kshetra Samachara
26/10/2021 08:26 am