ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕರೋಡಪತಿ ಆಗಬೇಕಾ ಏಚ್ಚರ...ಕಾದಿದೆ ಆನ್ಲೈನ್ ದೋಖಾ

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ: ಟೋಪಿ ಹಾಕಿಸಿಕೊಳ್ಳುವವರು ಇರುವವರೆಗೆ ಟೋಪಿ ಹಾಕುವವರು ಇದ್ದೇ ಇರುತ್ತಾರೆ. ಅಮಾಯಕರೇನು, ಜನಸಾಮಾನ್ಯರಿಗೆ ಆನ್ಲೈನ್ ವಂಚನೆ ಬಗ್ಗೆ ಅರಿವು ಮೂಡಿಸಬೇಕಾದ ಪೊಲೀಸ್ ಅಧಿಕಾರಿಗಳೇ ಮೋಸ ಹೋದ ಉದಾಹರಣೆಗಳಿವೆ. ಇತ್ತೀಚೆಗೆ ನಿವೃತ್ತ ಪೊಲೀಸ್ ಕಮಿಶ್ನರ್, ಖಡಕ್ ಅಧಿಕಾರಿ ಶಂಕರ ಬಿದರಿ ಅವರೆ ಸುಮಾರು 90,000 ರೂ ಕಳೆದುಕೊಂಡಿದ್ದಾರೆ

ಈಗ ಕೌನ್ ಬನೇಗಾ ಕರೋಡಪತಿ ಹೆಸರಿನಲ್ಲಿ ವಂಚಿಸುವ ಕಾಯಕ ಮತ್ತೇ ಆರಂಭವಾಗಿದೆ. ಕರೋಡಪತಿ ನಂಬಿ ಹಣ ಕಳೆದುಕೊಂಡು'' ರೋಡ್ ಪತಿ '' ಆದವರಿಗೇನೂ ಕಡಿಮೆ ಇಲ್ಲ. ಬನ್ನಿ ಅಂತಹ ಮತ್ತೊಂದು ಎಪಿಸೋಡ್ ನೋಡೋಣ.

ಹುಬ್ಬಳ್ಳಿಯ ದಾಮವ್ವ ನಗರದ ಮಹಿಳೆಗೆ ಸೆಪ್ಟೆಂಬರ್ 29 ರಂದು ಅಪರಿಚಿತ ವ್ಯಕ್ತಿ ವಾಟ್ಸಪ್ ಕರೆ ಮಾಡಿ, 25 ಲಕ್ಷ ರೂಪಾಯಿ ಲಕ್ಕಿ ಡ್ರಾದ ಲಾಟರಿ ಹೊಡೆದಿರೋದಾಗಿ ಹೇಳಿದ್ದಾರೆ. ಆದ್ರೆ ಮಹಿಳೆ ಅದನ್ನು ನಂಬದೇ ಇದ್ದಾಗ ಮಹಿಳೆಗೆ ಕೌನ್ ಬನೇಗಾ ಕರೋಡಪತಿ ಲಕ್ಕಿ ಡ್ರಾ ಇಮೇಜ್ ಕಳುಹಿಸಿದ್ದಾರೆ. ಕೆಬಿಸಿ ಲಕ್ಕಿ ಡ್ರಾ ನ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖೇಶ ಅಂಬಾನಿ ಹಾಗೂ ಅಮಿತಾಬಚ್ಚನ್ ಪೋಟೋಗಳನ್ನು ಬಳಸಲಾಗಿದೆ. ಅಲ್ಲದೇ ಲಕ್ಕಿ ಡ್ರಾ ದ ಒಂದು ಆಡಿಯೋವನ್ನು ಕೂಡ ಕಳುಹಿಸಿ ಮಹಿಳೆಯನ್ನು ನಂಬಿಸಿದ್ದಾರೆ.

ವಾಟ್ಸಪ್ ನಲ್ಲಿ ಬಂದ ಆಡಿಯೋವನ್ನು ನಂಬಿ ಆಕೆ ನಂಬಿ " 25 ಲಕ್ಷ ರೂಪಾಯಿ ಹಣ ನಿಮ್ಮ ಖಾತೆಗೆ ಜಮಾ ಮಾಡಬೇಕಾದರೆ, ಕಸ್ಟಮ್ ಚಾರ್ಜ್, ಇನ್ಶುರೆನ್ಸ್ ಹಾಗೂ ಎಸ್.ಬಿ.ಐ ಖಾತೆಗೆ ಜಮಾ ಮಾಡಿದ್ದಾರೆ. 1 ಲಕ್ಷ 28 ಸಾವಿರ ರೂಪಾಯಿ ವರ್ಗಾವಣೆ ಮಾಡಿ, ಮಹಿಳೆ ಲಾಟರಿ ಹಣಕ್ಕಾಗಿ ‌ಕಾಯ್ದು ಕುಳಿತಿದ್ದಾರೆ. ಆದರೆ, ಹಣ ಪಡೆದ ನಂತರ ಆನ್ಲೈನ್ ಚೋರರು ತಮ್ಮ ನಂಬರ್ ಬಂದ್ ಮಾಡಿ‌ದ್ದಾರೆ. ಮೋಸ ಹೋದ ಮಹಿಳೆ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರು ತನಿಖೆ ನಡೆಸುತ್ತಿದ್ದು ಆರೋಪಿಗಳ ಬಂಧನಕ್ಕೆ ಬಲೆ‌ ಬೀಸಿದ್ದಾರೆ. ಅವಳಿ ನಗರದಲ್ಲಿ ಇತ್ತಿಚೀನ ದಿನಗಳಲ್ಲಿ ಇಂತಹ ಪ್ರಕರಣಗಳ ದಿನಕ್ಕೆ ಹೆಚ್ಚುತ್ತಿದ್ದು, ಸಾವಜನಿಕರು ಜಾಗರೂಕರಾಗಿರಬೇಕು.

Edited By : Manjunath H D
Kshetra Samachara

Kshetra Samachara

20/10/2021 03:01 pm

Cinque Terre

56.68 K

Cinque Terre

8

ಸಂಬಂಧಿತ ಸುದ್ದಿ