ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಕ್ಷ್ಮೇಶ್ವರ: ಕಣ್ಣಿಗೆ ಕಂಡರು ಕಾಣದಂತೆ ಇರುವ ಅಧಿಕಾರಿಗಳು: ಅಕ್ರಮ ಮರಳು ದಂಧೆಗೆ ಇಲ್ಲ ಕಡಿವಾಣ...!

ಲಕ್ಷ್ಮೇಶ್ವರ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ನಾದಿಗಟ್ಟಿ‌ ಹಾಗೂ ಆದರಹಳ್ಳಿ ಗ್ರಾಮಗಳಲ್ಲಿ ನೂರಾರು ಟಿಪ್ಪರ್ ಮತ್ತು ಸಾವಿರಾರು ಟ್ರ್ಯಾಕ್ಟರಗಳ ಮೂಲಕ ಅಕ್ರಮವಾಗಿ ಜವಳು ಪ್ರದೇಶಗಳಲ್ಲಿ ಮರಳನ್ನು ತೆಗೆಯುತ್ತಿದ್ದರು ಅಧಿಕಾರಿಗಳು ಮಾತ್ರ ಜಾಣ ಕುರುಡುತನ ತೋರುತ್ತಿದ್ದಾರೆ..

ಮೊನ್ನೆಯಷ್ಟೇ ಅಕ್ರಮವಾಗಿ ಮರಳನ್ನು ತೆಗೆಯುತ್ತಿದ್ದ ಚನ್ನಪಟ್ಟಣ ಹಾಗೂ ಅಕ್ಕಿಗುಂದ ಗ್ರಾಮಗಳಲ್ಲಿ ಅರಣ್ಯ ಇಲಾಖೆಯವರು ಸಂಗ್ರಹಿಸಿ ಇಟ್ಟ ಮರಳನ್ನು ನೆಲಸಮಗೊಳಿಸಿ ಗಪ್ಪ ಚುಪ್ಪ ಕುಳಿತುಕೊಂಡಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನ ನಾದಿಗಟ್ಟಿ ಹಾಗೂ ಆದರಹಳ್ಳಿ ಗ್ರಾಮಗಳಲ್ಲಿ ಇನ್ನೂ ಜವಳ ಪ್ರದೇಶಗಳಲ್ಲಿ ಅಕ್ರಮವಾಗಿ ಮರಳನ್ನು ತೆಗೆದು ಹೊರ ಜಿಲ್ಲೆ ಹಾಗೂ ಹೊರ ತಾಲೂಕಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಲಕ್ಷ್ಮೇಶ್ವರ ತಹಶೀಲ್ದಾರರಿಗೆ ಹೇಳಿದರೆ ಅರಣ್ಯ ಇಲಾಖೆಯವರಿಗೆ ಹೇಳಿದ್ದೇನೆ ಎಂದು ಹೇಳುತ್ತಾರೆ‌.

ಇನ್ನೂ ಅರಣ್ಯ ಇಲಾಖೆಯವರಿಗೆ ಕೇಳಿದರೆ ಅದು ನಮಗೆ ಸಂಬಂದ ಪಡುವುದಿಲ್ಲ ಎಂದು ಒಬ್ಬರ ಮೇಲೆ ಒಬ್ಬರು ಹೇಳಿ ಜಾರಿ ಕೊಳ್ಳುತ್ತಿದ್ದಾರೆ. ಆದರಿಂದ ಜಿಲ್ಲಾಧಿಕಾರಿಗಳು ಇವರಿಗೆ ಸರ್ವೆ ಮಾಡಿ ಕೊಡಬೇಕಾಗಿದೆ ನಾದಿಗಟ್ಟಿ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದ್ದರು ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ.

ಇಲ್ಲಿ ಸಾವಿರಾರು ಟ್ರ್ಯಾಕ್ಟರಗಳು ಟಿಪ್ಪರಗಳು ಹಗಲು ರಾತ್ರಿ ಎನ್ನದೇ ಮರಳು ಅಗೆಯುತ್ತಿದ್ದಾರೆ ಇನ್ನೂ ರೈತರ ಹೊಲಗಳು ಹಾಳಾಗುತ್ತೀವೆ ಇಷ್ಟೆಲ್ಲಾ ಇದ್ದರು ಅಧಿಕಾರಿಗಳು ಮಾತ್ರ ಸುಮ್ಮನೆ ಕುಳಿತುಕೊಂಡಿದ್ದಾರೆ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.

ಲಕ್ಷ್ಮೇಶ್ವರ ತಾಲೂಕಿನ ನಾದಿಗಟ್ಟಿ‌ ಆದರಹಳ್ಳಿ ಗ್ರಾಮಗಳಲ್ಲಿ ಅಕ್ರಮ ಮರಳುಗಾರಿಕೆ ಮಾಡುತ್ತಿರುವವರು ರೈತರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರಂತೆ ಇನ್ನಾದರೂ ಈ ನಾದಿಗಟ್ಟಿ‌ ಆದರಹಳ್ಳಿ ಗ್ರಾಮಗಳಲ್ಲಿ ಅಕ್ರಮ ಮರಳುಗಾರಿಕೆಗೆ ಬ್ರೇಕ್ ಹಾಕುವುವರೇ ಜಿಲ್ಲಾಧಿಕಾರಿಗಳು ಎಂಬುವುದನ್ನು ಕಾದು ನೋಡಬೇಕಾಗಿದೆ.

Edited By : Manjunath H D
Kshetra Samachara

Kshetra Samachara

12/10/2021 03:38 pm

Cinque Terre

40.67 K

Cinque Terre

1

ಸಂಬಂಧಿತ ಸುದ್ದಿ