ಹುಬ್ಬಳ್ಳಿ: ಹಣ ಡಬಲ್ ಮಾಡಿಕೊಡುತ್ತೇನೆಂದು ನಂಬಿಸಿ ಮಹಿಳೆಯೊಬ್ಬರಿಂದ, ಬರೊಬ್ಬರಿ 1.9 ಕೋಟಿ ರೂ. ಪಡೆದ ವ್ಯಕ್ತಿ , ಹಣ ವಾಪಸ್ ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿರುವ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಗದಗ ರಸ್ತೆ ವಿನೋಬ ನಗರದ ಸುಧಾಕರ ಮತ್ತು ಅವರ ಪತ್ನಿ , ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ಸಂಬಂಧಿ ಮಹಿಳೆಯೊಬ್ಬರಿಂದ 2016 ರಿಂದ 2020 ರ ನಡುವಿನ ಅವಧಿಯಲ್ಲಿ ಹಣ ಪಡೆದಿದ್ದರು. ಮಹಿಳೆ ಆಸ್ತಿ ಮಾರಾಟ ಮಾಡಿ. ಚಿನ್ನ ಅಡವಿಟ್ಟು ಹಂತ ಹಂತವಾಗಿ ಹಣ ಕೊಟ್ಟಿದ್ದರು. ನಂತರ ಸಂಶಯಗೊಂಡ ಮಹಿಳೆ ಹಣ ವಾಪಸ್ ಕೇಳಿದ್ದರು. ಇಂದು ನಾಳೆ ಎಂದು ಕಾಲಹರಣ ಮಾಡಿದ್ದ ಸುಧಾಕರ ದಂಪತಿ, ಮತ್ತೆ ಹಣ ಕೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ .
Kshetra Samachara
11/10/2021 10:14 am