ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಬಕಾರಿ ಇಲಾಖೆ ಕಾರ್ಯಾಚರಣೆ: ಲಕ್ಷಾಂತರ ರೂ. ಮೌಲ್ಯದ ಮದ್ಯ ಬಿಟ್ಟು ಆರೋಪಿತರು ಎಸ್ಕೇಪ್

ಹುಬ್ಬಳ್ಳಿ: ಅಕ್ರಮವಾಗಿ ಆಟೋದಲ್ಲಿ ಮದ್ಯವನ್ನು ಸಾಗಾಟ ಮಾಡುತ್ತಿದ್ದ ವೇಳೆಯಲ್ಲಿ ಸರಿಯಾದ ಮಾಹಿತಿ ಕಲೆ ಹಾಕಿದ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಟೋ ಹಾಗೂ ಮದ್ಯ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.

ಹೌದು...ಇಂದು ನಗರದ ಅಂಜುಮನ್ ಶಾದಿ ಮಹಲ್ ಹತ್ತಿರ ದಾಳಿ ನಡೆದ ಸಮಯದಲ್ಲಿ ಸುಮಾರು 1,22,916 ರೂಪಾಯಿ ಮೌಲ್ಯದ ಆಟೋದಲ್ಲಿ 164.160 ಲೀಟರ್ ಮದ್ಯ ಹಾಗೂ 46.800 ಲೀಟರ್ ಬಿಯರ್ ಸಿಕ್ಕಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 11 ಮತ್ತು 14 ರ ಉಲ್ಲಂಘನೆ ಹಾಗೂ 32(1), 38(ಎ), ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುವ ಕಾರಣ ಪರಾರಿತ ಆರೋಪಿ ಹಾಗೂ ವಾಹನದ ಮಾಲೀಕನ ವಿರುದ್ಧ ಪ್ರಥಮ ವರ್ತಮಾನ ವರದಿಯನ್ನು ಹುಬ್ಬಳ್ಳಿ ಉಪ ವಿಭಾಗ -01 ರ ಅಬಕಾರಿ ನಿರೀಕ್ಷಕರಾದ ನೇತ್ರಾ ಉಪ್ಪಾರ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ದಾಳಿಯಲ್ಲಿ ಅಬಕಾರಿ ಸಿಬ್ಬಂದಿ ಜಾನ್ ವರ್ಗಿಸ್, ಸಿದ್ದಪ್ಪ ಕಮ್ಮಾರ, ಐ. ಡಿ. ಕಿತ್ತೂರು ಭಾಗವಹಿಸಿದ್ದರು.

Edited By : Nagaraj Tulugeri
Kshetra Samachara

Kshetra Samachara

08/10/2021 05:31 pm

Cinque Terre

45.46 K

Cinque Terre

3

ಸಂಬಂಧಿತ ಸುದ್ದಿ