ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆಯ ಹಿತ್ತಲಿನಲ್ಲಿ ಗಾಂಜಾ ಬೆಳೆದ ವ್ಯಕ್ತಿ ಅರೆಸ್ಟ್ !

ಕುಂದಗೋಳ : ತನ್ನ ಮನೆಯ ಹಿಂದೆ ಅಕ್ರಮವಾಗಿ ಗಾಂಜಾ ಗಿಡವನ್ನು ಬೆಳೆದಿದ್ದ ಆರೋಪಿಯನ್ನು ಕುಂದಗೋಳ ಪೊಲೀಸರು ಮಂಗಳವಾರ ಮಧ್ಯಾಹ್ನದ ಅವಧಿಯಲ್ಲಿ ಬಂಧಿಸಿದ್ದಾರೆ.

ಕಡಪಟ್ಟಿ ಗ್ರಾಮದ ಮಲ್ಲಪ್ಪ ಯಲ್ಲಪ್ಪ ಬಳಿಗೇರ್ ಎಂಬಾತನೇ ತನ್ನ ಮನೆಯ ಹಿಂದೆ ಅಕ್ರಮವಾಗಿ 1 ಕೆಜಿ 500 ಗ್ರಾಂ ತೂಕದ 4500 ರೂಪಾಯಿ ಮೌಲ್ಯದ ಗಾಂಜಾ ಬೆಳೆದಿದ್ದು ಖಚಿತ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಯನ್ನು ಗಾಂಜಾ ಸಮೇತ ಬಂಧಿಸಿದ್ದಾರೆ.

ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

Edited By : Nirmala Aralikatti
Kshetra Samachara

Kshetra Samachara

06/10/2021 04:21 pm

Cinque Terre

22.87 K

Cinque Terre

0

ಸಂಬಂಧಿತ ಸುದ್ದಿ