ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರೈಲಿನಲ್ಲಿ ಹಸಿ ಗಾಂಜಾ ಪತ್ತೆ

ಹುಬ್ಬಳ್ಳಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ಪ್ರಯಾಣಿಕನು ಬಿಟ್ಟು ಹೋಗಿದ್ದ ಬ್ಯಾಗ್ ನಲ್ಲಿ 1.12 ಲಕ್ಷ ರೂ . ಮೌಲ್ಯದ ಕೆ.ಜಿ. ಗಾಂಜಾ ಪತ್ತೆಯಾಗಿದೆ.

ಹೌದು, ಗುಂತಕಲ್ ರೈಲು ನಿಲ್ದಾಣದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ, ಅಮರಾವತಿ ಎಕ್ಸಪ್ರೆಸ್ ರೈಲಿನಲ್ಲಿ ಗಾಂಜಾ ಪತ್ತೆಯಾಗಿದೆ. ಅಪರಿಚಿತ ಪ್ರಯಾಣಿಕ ರೈಲಿನಲ್ಲಿಯೇ ಬ್ಯಾಗ್ ಬಿಟ್ಟು ಇಳಿದಿದ್ದರ ಬಗ್ಗೆ ಪ್ರಯಾಣಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಈ ವೇಳೆ ಕರ್ತವ್ಯ ನಿರತ ಟಿಟಿಐ ಬ್ಯಾಗ್ ನ ಮಾಲೀಕರು ಬರದಿದ್ದ ಕಾಲಕ್ಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಬಂದ ನಂತರ ಬ್ಯಾಗ್‌ನ್ನು ಶ್ವಾನದಳ ಪರಿಶೀಲಿಸಿತು. ಬಳಿಕ ಪೊಲೀಸರು ಹಾಗೂ ರೈಲ್ವೆ ಸಿಬ್ಬಂದಿ ಎರಡು ಬ್ಯಾಗ್ ತೆರೆದಾಗ ಬಂಡಲ್ ಹಸಿ ಗಾಂಜಾ ಪತ್ತೆಯಾಗಿದೆ. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

14/09/2021 11:17 am

Cinque Terre

31.08 K

Cinque Terre

1

ಸಂಬಂಧಿತ ಸುದ್ದಿ