ಹುಬ್ಬಳ್ಳಿ: ಮದ್ಯದ ಅಮಲಿನಲ್ಲಿ ಹುಬ್ಬಳ್ಳಿಯ ರೆಡಿಯೋ ಜಾಕಿಯ ಸ್ನೇಹಿತರು ಗಲಾಟೆ ಮಾಡಿಕೊಂಡ ಘಟನೆ ನಗರದ ಗೋಕುಲ ರಸ್ತೆಯಲ್ಲಿರುವ ಐಸ್ ಕ್ಯೂಬ್ ಪಬ್‌ನಲ್ಲಿ ನಡೆದಿದೆ.
ಹೌದು. ಪಬ್‌ನಲ್ಲಿ ಆರ್‌ಜೆ (ರೇಡಿಯೋ ಜಾಕಿ) ಹಾಗೂ ಸ್ನೇಹಿತರು ಗಲಾಟೆ ಮಾಡಿಕೊಂಡಿದ್ದಾರೆ. ಪ್ಲೇಟ್‌ನಲ್ಲಿ ಸಾಸ್ ಹಾಕಿದ್ದಕ್ಕೆ ಗಲಾಟೆಯಾಗಿದೆ ಎನ್ನಲಾಗಿದೆ. ನಿನ್ನೆ ರಾತ್ರಿ ಕುಡಿದ ನಶೆಯಲ್ಲಿ ಬಾಟಲಿ ತೂರಾಡಿ ಗಲಾಟೆ ಮಾಡಿಕೊಂಡಿದ್ದಾರೆ.
ಆರ್‌ಜೆ ಮೇಘಾ, ಪ್ರವೀಣ, ಕೃತಿಕಾ, ಹರ್ಷ, ಶ್ರೀನಿವಾಸ, ಶರಣ್ಯ, ಶೈಲೇಶ್ ಮಧ್ಯೆ ಮಾರಾಮಾರಿ ನಡೆದಿದ್ದು, ಕುಡಿದ ನಶೆಯಲ್ಲಿ ಬೀರ್ ಬಾಟಲಿ ತೂರಾಡಿಕೊಂಡು ಪಬ್‌ನಲ್ಲಿ ಸ್ನೇಹಿತರು ಗಲಾಟೆ ಮಾಡಿದ್ದಾರೆ. ಗಲಾಟೆಯಲ್ಲಿ ಪ್ರವೀಣ, ಮೇಘಾ ಸೇರಿದಂತೆ ಕೆಲವರಿಗೆ ಗಾಯವಾಗಿದ್ದು, ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆಯಲ್ಲಿ ದೂರು- ಪ್ರತಿದೂರು ದಾಖಲಾಗಿದೆ. ಇನ್ನೂ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಒದಗಿಸುವಂತೆ ಪಬ್ ಮಾಲೀಕರಿಗೆ ಪೊಲೀಸರ ಸೂಚನೆ ನೀಡಿದ್ದಾರೆ.
Kshetra Samachara
13/09/2021 03:46 pm