ಧಾರವಾಡ: ವೇತನ ಹೆಚ್ಚಳ ಹಾಗೂ ಅರಿಯರ್ಸ್ ಕೊಡಿಸಿದ್ದಕ್ಕೆ ಕವಿವಿ ಅಧೀನದ ಕರ್ನಾಟಕ ಕಾಲೇಜ್ ಸೂಪರ್ವೈಸರ್ ಹಾಗೂ ಮೇಲಾಧಿಕಾರಿಗಳಿಗೆ ಹಣ ನೀಡಬೇಕು ಎಂದು ಲಂಚ ಪಡೆಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಧಾರವಾಡದ ನಾಗೇಶ ವಾರಂಗ್ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಸೆಕ್ಯೂರಿಟಿ ಗಾರ್ಡ್‌ಗಳಿಂದ ಲಂಚ ಪಡೆದುಕೊಳ್ಳುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವೇತನ ಹೆಚ್ಚಿಗೆ ಮಾಡಿಸಿ ಅರಿಯರ್ಸ್ ಕೊಡಿಸಿದ್ದಕ್ಕೆ ಕೆಸಿಡಿ ಕಾಲೇಜಿನಲ್ಲಿ ಸಹಾಯಕ ಅಧೀಕ್ಷಕರಾಗಿ ಕೆಲಸ ಮಾಡುತ್ತಿರುವ ಚೌಹಾಣ್ ಅವರಿಗೆ ಹಣ ಕೊಡಬೇಕು ಎಂದು ಹೇಳಿ ಪ್ರತಿಯೊಬ್ಬ ಸೆಕ್ಯೂರಿಟಿ ಗಾರ್ಡ್‌ನಿಂದ ನಾಗೇಶ ವಾರಂಗ್ 2500 ರೂಪಾಯಿ ಸಂಗ್ರಹಿಸುತ್ತಿದ್ದ. ಜಯಪ್ರಕಾಶ ಎಂಬುವರು ಎಸಿಬಿಗೆ ದೂರು ನೀಡಿದ ಹಿನ್ನೆಲೆ ದಾಳಿ ಮಾಡಲಾಗಿದೆ.
ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಆರೋಪಿ ನಾಗೇಶ ದೂರುದಾರರಿಂದ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಆರೋಪಿ ವಾರಂಗ್ ಇದೇ ರೀತಿ ಹಲವು ಸೆಕ್ಯೂರಿಟಿ ಗಾರ್ಡ್‌ಗಳಿಂದ ಸಂಗ್ರಹಿಸಿದ್ದ 60,000 ರೂಪಾಯಿ ವಶಪಡಿಸಿಕೊಳ್ಳಲಾಗಿದೆ.
Kshetra Samachara
01/02/2021 12:11 pm