ನವಲಗುಂದ : ಕಳೆದ ಎರಡು ದಿನಗಳ ಹಿಂದೆ ನವಲಗುಂದ ತಾಲೂಕಿನ ಮೊರಬ ಗ್ರಾಮದ ಬಳಿಯ ಕಾಲುವೆಯಲ್ಲಿಕೊಚ್ಚಿಹೋಗಿದ್ದ ಹುಬ್ಬಳ್ಳಿಯ ಪೊಲೀಸ್ ಪೇದೆಯ ಏಕಮಾತ್ರ ಪುತ್ರನ ಶವ ಇಂದು ನಾಗರಹಳ್ಳಿ ಕಾಲುವೆಯಲ್ಲಿ ಪತ್ತೆಯಾಗಿದೆ.
ಗೆಳೆಯರೊಂದಿಗೆ ಕಾಲುವೆಯಲ್ಲಿ ಆಟವಾಡಲು ಹೋದ 19 ವರ್ಷದ ಕಾಂತೇಶ ಎಂಬ ಯುವಕ ಕಾಲುವೆಯಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದ. ಆದರೆ ಮಂಗಳವಾರ ಆತನ ಶವ ಅಣ್ಣಿಗೇರಿ ತಾಲೂಕಿನ ನಾಗರಹಳ್ಳಿ ಕಾಲುವೆಯಲ್ಲಿ ಸಿಕ್ಕಿದೆ. ಈತ ಎಸ್ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಪೇದೆ ಪರಶುರಾಮ ಮನಗುಂಡಿ ಅವರ ಪುತ್ರ ಕಾಂತೇಶ ಮನಗುಂಡಿ ಎಂದು ತಿಳಿದುಬಂದಿದೆ. ಮುಖ್ಯ ಪೇದೆ ಪರಶುರಾಮ ಮನಗುಂಡಿಯವರ ಮೂರು ಮಕ್ಕಳ ಪೈಕಿ ಈಗಾಗಲೇ ಎರಡು ಮಕ್ಕಳು ಅಕಾಲಿಕವಾಗಿ ಸಾವನ್ನಪ್ಪಿದ್ದರು. ಉಳಿದ ಒಬ್ಬ ಮಗ ಕಾಂತೇಶ ಕೂಡ ದುರ್ಮರಣಕ್ಕೀಡಾಗಿದ್ದು ಕುಟುಂಬಕ್ಕೆ ದಿಕ್ಕೆ ತೋಚದಂತಾಗಿದೆ. .
Kshetra Samachara
05/01/2021 09:04 pm