ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದುವೆ ಆಗೋದಾಗಿ ನಂಬಿಸಿ ಮಗು ಕೊಟ್ಟ: ನಂತರ ಕೈಕೊಟ್ಟ

ಹುಬ್ಬಳ್ಳಿ: ಮೂವರು ಮಕ್ಕಳಿರುವ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಯುವಕ ಆಕೆಯೊಂದಿಗೆ ದೈಹಿಕ ಸಂಪರ್ಕ ನಡೆಸಿದ್ದಾನೆ. ಈಗ ಮಗು ಜನಿಸಿದಾಗ ಮದುವೆಗೆ ನಿರಾಕರಿಸಿದ್ದಾನೆ. ಮೋಸ ಹೋದ ಮಹಿಳೆ ಯುವಕನ ವಿರುದ್ಧ ನವನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಬೈರಿದೇವರಕೊಪ್ಪದ ಕಳ್ಳಿ ಓಣಿ ನಿವಾಸಿ ಸಿದ್ರಾಮ ಚಿಕ್ಕಮಠ ವಿರುದ್ಧ ಮಹಿಳೆ ಪ್ರಕರಣ ದಾಖಲಿಸಿದ್ದಾರೆ.

2007ರಲ್ಲಿ ಆ ಮಹಿಳೆ ವರೂರಿನ ನಿವಾಸಿಯೊಬ್ಬರ ಜೊತೆ ಮದುವೆಯಾಗಿದ್ದರು. ಐದು ವರ್ಷದ ಬಳಿಕ ಗಂಡನ ಆರೋಗ್ಯ ಕೆಟ್ಟಿದ್ದರಿಂದ ತವರು ಮನೆಗೆ ವಾಪಸ್‌ ಬಂದಿದ್ದಳು. ಆ ವೇಳೆ ಸಿದ್ರಾಮ ಎಂಬಾತ ಮಕ್ಕಳಿಗೆ ಸಹಾಯ ಮಾಡುವ ನೆಪದಲ್ಲಿ ಸ್ನೇಹ ಬಯಸಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. 2018ರ ಅಕ್ಟೋಬರ್‌ನಲ್ಲಿ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮದುವೆ ವಿಷಯ ಪ್ರಸ್ತಾಪಿಸಿದಾಗ ನಿರಾಕರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

05/01/2021 04:23 pm

Cinque Terre

56.2 K

Cinque Terre

2

ಸಂಬಂಧಿತ ಸುದ್ದಿ