ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸಾಲ ಬಾಧೆಗೆ ಹೆದರಿ ಕೆರೆಗೆ ಹಾರಿ ಪ್ರಾಣಬಿಟ್ಟ ಅನ್ನದಾತ

ಕುಂದಗೋಳ : ಸಾಲದ ಬಾಧೆಗೆ ಭಯಗೊಂಡ ರೈತನೊಬ್ಬ ತಮ್ಮ ಗ್ರಾಮದ ಸಾರ್ವಜನಿಕ ಕುಡಿಯುವ ನೀರಿನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ವ್ಯಕ್ತಿಯನ್ನು ತಾಲೂಕಿನ ಯರಗುಪ್ಪಿ ಗ್ರಾಮದ ಮಲ್ಲಪ್ಪ ನಿಂಗಪ್ಪ ಆರವಾಳ ವಯಾ 68 ಎಂದು ತಿಳಿದು ಬಂದಿದ್ದು, ಮನೆ ಜವಾಬ್ದಾರಿ ನಿರ್ವಹಿಸುತ್ತಿದ್ದ ಈತ ತನ್ನ 20 ಎಕರೆ ಬಾಬತ್ತಿನ ಹೊಲದ ಮೇಲೆ ಕೃಷಿ ಚಟುವಟಿಕೆಗಾಗಿ ಗ್ರಾಮದ ಕೆ.ವ್ಹಿ.ಜಿ ಬ್ಯಾಂಕ್'ನಲ್ಲಿ 1.50.000 ಸಾವಿರ ಸಾಲ ಮಾಡಿಕೊಂಡಿದ್ದಾನೆ.

ಕಳೆದೆರಡು ವರ್ಷ ಈ ವರ್ಷ ಸೇರಿ ಅತಿವೃಷ್ಟಿ ಪರಿಣಾಮ ಬೆಳೆದ ಬೆಳೆ ಕೈಗೆ ಬಾರದೇ ಮಾಡಿದ ಸಾಲ ತೀರಿಸುವುದು ಹೇಗೆ ಎಂದು ಮನನೊಂದು ಭಾನುವಾರದ ಮಧ್ಯಾಹ್ನದ ಅವಧಿಯಲ್ಲಿ ಕೆರೆಗೆ ಹಾರಿ ಪ್ರಾಣ ಬಿಟ್ಟದ್ದಾನೆ.

ಈ ಕುರಿತು ಕುಂದಗೋಳ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ.

Edited By : Nirmala Aralikatti
Kshetra Samachara

Kshetra Samachara

29/12/2020 01:25 pm

Cinque Terre

55.08 K

Cinque Terre

0

ಸಂಬಂಧಿತ ಸುದ್ದಿ