ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪೊಲೀಸರೇ ಮೂಕ ಪ್ರೇಕ್ಷಕರಾದರಾ?

ಧಾರವಾಡ: ಧಾರವಾಡದ ಪ್ರತಿಷ್ಠಿತ ನುಗ್ಗಿಕೇರಿ ದೇವಸ್ಥಾನದಲ್ಲಿ ಇಂದು ಹಿಂದೂಯೇತರ ಅಂಗಡಿಗಳ ಮೇಲೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿದ್ದು, ದಾಳಿ ವೇಳೆ ಪೊಲೀಸರು ಸ್ಥಳದಲ್ಲಿದ್ದರೂ ಏನೂ ಮಾಡದಂತ ಪರಿಸ್ಥಿತಿಯಲ್ಲಿದ್ದರು.

ಹಿಂದೂಪರ ಸಂಘಟನೆ ಕಾರ್ಯಕರ್ತರು ನಬಿಸಾಬ್ ಎಂಬುವವರ ಅಂಗಡಿ ಮೇಲೆ ದಾಳಿ ನಡೆಸಿ, ಅವರ ಕಲ್ಲಂಗಡಿ ಹಣ್ಣುಗಳನ್ನು ಒಡೆದು ಹಾಕಿದರು. ಅಲ್ಲದೇ ಕಂಡ ಕಂಡವರು ಕಲ್ಲಂಗಡಿ ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಿದ್ದರೂ ಪೊಲೀಸರು ಏನೂ ಮಾಡದಂತಹ ಪರಿಸ್ಥಿತಿಯಲ್ಲಿದ್ದರು. ಈ ವೇಳೆ ಹಿಂದೂ ಕಾರ್ಯಕರ್ತರೊಬ್ಬರು, ಎಲ್ಲರೂ ಸುಮ್ಮನೆ ನಿಂತುಕೊಂಡು ನೋಡಬೇಡಿ ಮುಂದೆ ನಿಮ್ಮನ್ನೂ ಅನ್ಯ ಕೋಮಿನ ಹೆಸರುಗಳಿಂದ ಕರೆಯುವಂತೆ ಮಾಡುತ್ತಾರೆ ಎಚ್ಚರಗೊಳ್ಳಿ ಎಂಬ ಮಾತುಗಳನ್ನಾಡಿದ್ದಾರೆ.

ಮತ್ತೊಬ್ಬ ಕಾರ್ಯಕರ್ತ, ಮೊನ್ನೆಯಷ್ಟೇ ಇವರಿಗೆ ಅಂಗಡಿಗಳನ್ನು ತೆರವು ಮಾಡಿಕೊಳ್ಳುವಂತೆ ದೇವಸ್ಥಾನದ ಟ್ರಸ್ಟ್ ಕಮಿಟಿಯವರಿಗೆ ಮನವಿ ಕೊಟ್ಟರೂ ಇವರು ಮತ್ತೆ ಅಂಗಡಿ ಇಟ್ಟಿದ್ದಾರೆ ಎಂದು ಪೊಲೀಸರ ಮುಂದೆಯೇ ಹೇಳಿದ್ದಾರೆ. ಆನಂತರ ಸ್ಥಳದಲ್ಲಿದ್ದ ಪೊಲೀಸ್ ಪೇದೆ ತಮ್ಮ ಮೇಲಾಧಿಕಾರಿಗಳಿಗೆ ಈ ವಿಷಯ ತಿಳಿಸಿದ್ದು, ಸ್ಥಳಕ್ಕೆ ಹೆಚ್ಚುವರಿ ಪೊಲೀಸರು ಬಂದ ನಂತರ ಪರಿಸ್ಥಿತಿ ತಿಳಿಗೊಂಡಿದೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

09/04/2022 11:04 pm

Cinque Terre

191.29 K

Cinque Terre

151

ಸಂಬಂಧಿತ ಸುದ್ದಿ