ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾವಿನಲ್ಲೂ ಒಂದಾದ ದಂಪತಿ- ಪತಿಯ ಸಾವಿನ ಬೆನ್ನಲ್ಲೇ ಪತ್ನಿಗೂ ಹೃದಯಾಘಾತ

ಕುಂದಗೋಳ: ಸತಿ-ಪತಿಗಳು ಒಂದಾದ ಭಕ್ತಿ ಶಿವನಿಗೆ ಒಪ್ಪುವ ಮಾತಿನಂತೆ ಕುಂದಗೋಳ ಪಟ್ಟಣದ ಕುಂಬಾರಗಲ್ಲಿಯಲ್ಲಿ ಸಾವಿನಲ್ಲೂ ದಂಪತಿ ಒಂದಾಗಿದ್ದಾರೆ.

ಫೆರಿದ್ಧೀನ್ ಇಮಾಮಸಾಬ್ ಪಠಾಣ್ (74) ಎಂಬವರು ಇಂದು ಬೆಳಿಗ್ಗೆ 6:30ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕುಟುಂಬಸ್ಥರು, ಸಂಬಂಧಿಕರು ಅವರ ಶವ ಸಂಸ್ಕಾರ ಮುಗಿಸಿ ಮನೆಗೆ ಮರಳುವ ಹೊತ್ತಿಗಾಗಲೇ ಅವರ ಪತ್ನಿ ಹುಸೇನಬಿ ಫೆರಿದ್ಧೀನ್ ಪಠಾಣ್ (70) ಪತಿಯ ಸಾವಿನ ದುಃಖ ತಾಳಲಾರದೆ ಇಂದು ಸಂಜೆ 4 ಗಂಟೆಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದ್ದು ಸಾವಿನಲ್ಲೂ ಒಂದಾದ ಸತಿ ಪತಿಗಳ ಹೊಂದಾಣಿಕೆಗೆ ಇಡೀ ಕುಂದಗೋಳ ಪಟ್ಟಣವೇ ಕಂಬನಿ ಮಿಡಿಯುತ್ತಿದೆ.

Edited By : Vijay Kumar
Kshetra Samachara

Kshetra Samachara

27/09/2020 05:03 pm

Cinque Terre

28.05 K

Cinque Terre

23

ಸಂಬಂಧಿತ ಸುದ್ದಿ