ಹುಬ್ಬಳ್ಳಿ: ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕನೋರ್ವ ಅಪಘಾತದಲ್ಲಿ ಮೃತಪಟ್ಟರೂ ನೀಡಬೇಕಾದ ಪರಿಹಾರ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯದ ವಾರೆಂಟ್ ಅನ್ವಯ ಕೋರ್ಟ್ ಸಿಬ್ಬಂದಿ ಐರಾವತ ಬಸ್ಸೊಂದನ್ನು ಜಪ್ತಿ ಮಾಡಿ ಹುಬ್ಬಳ್ಳಿ ಕೋರ್ಟ್ ಎದುರು ತಂದು ನಿಲ್ಲಿಸಿದ್ದಾರೆ.
2019ರಲ್ಲಿ ಸಂಭವಿಸಿದ ನವಲಗುಂದ ಹುಬ್ಬಳ್ಳಿ ಅಪಘಾತದಲ್ಲಿ ದೇವಪ್ಪ ಕುಲಕರ್ಣಿ ಎಂಬವರು ಮೃತಪಟ್ಟಿದ್ದರು. ಮೃತ ಚಾಲಕನ ತಾಯಿ ಶಾಂತವ್ವ ಕರವೀರಪ್ಪ ಕುಲಕರ್ಣಿ ಇವರು ನಗರದ ಎರಡನೇ ಹಿರಿಯ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯ 28 ಲಕ್ಷ ಪರಿಹಾರ ಅದಕ್ಕೆ ಶೇ.6 ಬಡ್ಡಿ ಹಾಕಿ ನೀಡುವಂತೆ ಸೂಚಿಸಿತ್ತು.
ಆದರೇ ಸಾರಿಗೆ ಸಂಸ್ಥೆಯವರಿಗೆ ವಾರೆಂಟ್ ನೀಡಿದರೂ ಪರಿಹಾರ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಪ್ತಿ ವಾರಂಟ್ ಅನ್ವಯ ಇಂದು ನ್ಯಾಯಾಲಯದ ಸಿಬ್ಬಂದಿ ಕೆಎ 17,ಎಫ್ 1945 ವಾಹನ ಜಪ್ತಿ ಮಾಡಿ ತಂದು ಕೋರ್ಟ್ ಎದುರು ನಿಲ್ಲಿಸಿದ್ದಾರೆ. ಮೃತ ಪ್ರಯಾಣಿಕನ ಪರ ಅರುಣ ಪಾಟೀಲ ವಕಾಲತ್ತು ವಹಿಸಿದ್ದರು.
ಒಟ್ಟಿನಲ್ಲಿ ಪರಿಹಾರ ಬಾರದೇ ಇರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಸಾರಿಗೆ ಸಚಿವರು ಹಾಗೂ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಸೂಕ್ತ ನಿರ್ಧಾರ ಕೈಗೊಂಡು ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
15/07/2022 04:42 pm