ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕಲುಷಿತ ಬಿತ್ತನೆ ಬೀಜ ಪೂರೈಕೆ: ರೈತ ಸಂಪರ್ಕ ಕೇಂದ್ರದ ಬಾಗಿಲು ಮುಚ್ಚಿ ರೈತರ ಧರಣಿ

ಕುಂದಗೋಳ: ಮುಂಗಾರು ಬಿತ್ತನೆಗೆ ರೈತ ಸಂಪರ್ಕ ಕೇಂದ್ರದಿಂದ ಬೀಜ ಖರೀದಿಸಿದ ರೈತರೊಬ್ಬರಿಗೆ ಬೀಜದ ಚೀಲದ ಒಳಗೆ ಮತ್ತೊಂದು ಕಲುಷಿತ ಶೇಂಗಾ ಸೇರಿದ ಬೀಜದ ಚೀಲ ಬಂದಿವೆ ಎಂದು ಆರೋಪಿಸಿ ರೈತ ಸಂಘಟನೆಗಳು ರೈತ ಸಂಪರ್ಕ ಕೇಂದ್ರದ ಬಾಗಿಲು ಮುಚ್ಚಿ ಧರಣಿ ನಡೆಸಿವೆ.

ಹೌದು ! ಕುಂದಗೋಳ ಪಟ್ಟಣದ ರೈತ ಮಲ್ಲಿಕಾರ್ಜುನ ಸೊಗಿ ಎಂಬುವವರು ನಿನ್ನೆ ಸೋಮವಾರ 30 ಕೆಜಿ ತೂಕದ ನಾಲ್ಕು ಶೇಂಗಾ ಬೀಜದ ಚೀಲಗಳನ್ನು ರೈತ ಸಂಪರ್ಕ ಕೇಂದ್ರದಿಂದ ಪಡೆದಿದ್ದಾರೆ. ಅದರಲ್ಲಿ ಒಂದು ಶೇಂಗಾ ಚೀಲದ ಒಳಗೆ ಮತ್ತೊಂದು ಕಲುಷಿತ ಶೇಂಗಾ ಸಿಪ್ಪೆ ತುಂಬಿದ ಚೀಲ ಬಂದಿದೆ ಎಂದು ರೈತ ಸಂಪರ್ಕ ಕೇಂದ್ರಕ್ಕೆ ಪುನಃ ಚೀಲ ತಂದು ವಿವಿಧ ರೈತರ ಸಮ್ಮುಖದಲ್ಲಿ ಧರಣಿ ನಡೆಸಿದ್ದಾರೆ.

ರೈತ ಸಂಪರ್ಕ ಕೇಂದ್ರಕ್ಕೆ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟದಿಂದ ಶೇಂಗಾ ಬೀಜ ಬಂದಿದ್ದು, ಒಂದು ಶೇಂಗಾ ಚೀಲದ ಒಳಗೆ ಕಲುಷಿತ ಸಿಪ್ಪೆ ಮಿಶ್ರಿತ ಶೇಂಗಾ ಪೂರೈಕೆಯಾಗಿದೆ‌ ಎಂಬ ಆರೋಪ ರೈತರದ್ದಾಗಿದೆ.

ಬೀಜ ವಿತರಣೆಯಲ್ಲಿ ದೋಷ ಮಾಡಿದ ಕಂಪನಿ ವಿರುದ್ಧ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ ರೈತರು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ಮುಂದುವರೆಸಿದ್ದಾರೆ.

Edited By : Somashekar
Kshetra Samachara

Kshetra Samachara

14/06/2022 03:22 pm

Cinque Terre

35.2 K

Cinque Terre

6

ಸಂಬಂಧಿತ ಸುದ್ದಿ