ಧಾರವಾಡ: ವಕೀಲ ವಿನೋದ ಶಂಕರಗೌಡ ಪಾಟೀಲ ಅವರ ಮೇಲೆ ದರ್ಪ ತೋರಿದ ಸಿಪಿಐ ಪ್ರಭು ಸೂರಿನ ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಧಾರವಾಡ ವಕೀಲರು ಕೋರ್ಟ ವೃತ್ತದ ಬಳಿ ಹುಬ್ಬಳ್ಳಿ, ಧಾರವಾಡ ರಸ್ತೆಯನ್ನು ಬಂದ್ ಮಾಡಿ ಹಠಾತ್ ಪ್ರತಿಭಟನೆ ನಡೆಸಿದರು.
ಧಾರವಾಡ ಜಿಲ್ಲಾಧಿಕಾರಿ ಬಳಿ ಪ್ರತಿಭಟನೆ ನಡೆಸಿ ಹೋದ ವಕೀಲರು ಅಲ್ಲಿಂದ ನೇರವಾಗಿ ಕೋರ್ಟ್ ವೃತ್ತ ಬಳಿ ಹುಬ್ಬಳ್ಳಿ, ಧಾರವಾಡ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟಿಸಿದರು.
ಸಿಪಿಐ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಇಲ್ಲದೇ ಹೋದರೆ ಸೋಮವಾರ ಉಗ್ರ ರೀತಿಯಲ್ಲಿ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಎಚ್ಚರಿಸಿದ ವಕೀಲರು ತಮ್ಮ ಮನವಿ ಸ್ವೀಕರಿಸಲು ಬರದೇ ಹೋದ ಜಿಲ್ಲಾಧಿಕಾರಿ ವಿರುದ್ಧ ವಕೀಲರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
27/11/2020 05:53 pm