ಹುಬ್ಬಳ್ಳಿ: ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದ ಮಹಿಳೆಯೊಬ್ಬರು, ಆಟೋ ಮೂಲಕ ಹುಬ್ಬಳ್ಳಿಯಲ್ಲಿರುವ ಗಾಂಧಿವಾಡಗೆ ಹೋಗುವ ಸಂದರ್ಭದಲ್ಲಿ, ಆಟೋದಲ್ಲಿ ತನ್ನ ಲ್ಯಾಪಟಾಪ್ ಬಿಟ್ಟು ಹೋಗಿದ್ದರು. ನಂತರ ಆಟೋದಲ್ಲಿದ್ದ ಲ್ಯಾಪ್‌ಟಾಪ್ ನೋಡಿದ ಚಾಲಕ ಶ್ರೀನಿವಾಸ್ ದಾಸರ, ಮಹಿಳೆ ವಿಳಾಸ ಹುಡುಕಲು ಪ್ರಯತ್ನಿಸಿದ್ರೂ ಸಿಗದ ಕಾರಣ, ಕೇಶ್ವಾಪೂರ ಪೊಲೀಸ್ ಠಾಣೆಗೆ ತೆರಳಿ ಲ್ಯಾಪ್‌ಟಾಪ್ ನೀಡಿ ಪ್ರಾಮಾಣಿತೆಗೆ ಸಾಕ್ಷಿಯಾಗಿದ್ದಾನೆ.
ಇನ್ನು ಪೊಲೀಸರು ಸಹ ಲ್ಯಾಪ್‌ಟಾಪ್ ಕಳಿದಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ, ಅ ಮಹಿಳೆಯನ್ನು ಠಾಣೆಗೆ ಕರೆಯಿಸಿ ಲ್ಯಾಪ್‌ಟಾಪ್ ಮರಳಿಸಿದ್ದಾರೆ. ಇನ್ನು ಆಟೋ ಚಾಲಕನ ಪ್ರಾಮಾಣಿಕತೆಗೆ ಠಾಣೆ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನ ಮಾಡಿ ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ಎಎಸ್‌ಐ ಜಯಶ್ರೀ ನಾಯ್ಕರ, ಸಿಬ್ಬಂದಿ ವಾಣಿ ದ್ಯಾವನೂರ್, ಸೇರಿದಂತೆ ಇತರರಿದ್ದರು.
Kshetra Samachara
29/08/2022 07:41 pm