ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುರೂಜಿ ಹತ್ಯೆ ಪ್ರಕರಣ: ಪೊಲೀಸರ ಎದುರು ಹತ್ಯೆಯ ಸತ್ಯ ಬಾಯ್ಬಿಟ್ಟ ಹಂತಕರು

ಹುಬ್ಬಳ್ಳಿ: ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಪೊಲೀಸರು ಫುಲ್ ಡ್ರೀಲ್ ಮಾಡಿದ್ದು, ಆರೋಪಿಗಳು ಹತ್ಯೆಯ ಕಾರಣ ಬಾಯ್ಬಿಟ್ಟಿದ್ದಾರೆ.

ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರ ಮುಂದೆ ಆರೋಪಿಗಳಾದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ದುಮ್ಮವಾಡ ಸತ್ಯ ಬಿಚ್ಚಿಟ್ಟಿದ್ದಾರೆ. ನಾವಿಬ್ಬರೂ ಚಂದ್ರಶೇಖರ ಗುರೂಜಿ ಬಳಿಯೇ 10-12 ವರ್ಷ ಕೆಲಸ ಮಾಡಿದ್ದೇವೆ. 2016ರಲ್ಲೇ ಕೆಲಸ ಬಿಟ್ಟಿದ್ದೇವೆ. ಅಲ್ಲಿಂದ ಹೊರಬಂದ ಬಳಿಕ ನಮ್ಮ ಪಾಡಿಗೆ ನಾವು ಸ್ವಂತ ಉದ್ಯೋಗ ಮಾಡುತ್ತಾ ಜೀವನ ಸಾಗಿಸುತ್ತಿದ್ದೆವು.

ರಿಯಲ್ ಎಸ್ಟೇಟ್ ಸೇರಿ ವಿವಿಧ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದೇವೆ. ಆದರೆ ನಮ್ಮ ಪ್ರತಿ ಕೆಲಸಕ್ಕೂ ಗುರೂಜಿ ಅಡ್ಡಗಾಲು ಹಾಕುತ್ತಿದ್ದರು. ಬದುಕುವುದಕ್ಕೂ ಬಿಡುತ್ತಿರಲಿಲ್ಲ, ವ್ಯಾಪಾರ ಮಾಡಲು ಸಹ ನಮ್ಮನ್ನ ಬಿಡಲಿಲ್ಲ. ಗುರೂಜಿ ಅಷ್ಟೊಂದು ಕಿರುಕುಳ ನೀಡುತ್ತಿದ್ದರು.

ಸಾಲದು ಅಂತಾ ಮಾನಸಿಕವಾಗಿ ಬಹಳಷ್ಟು ಕಿರುಕುಳ ನೀಡಿದ್ದಾರೆ. ನಾವು ಎಲ್ಲಿಯೇ ಯಾವುದೇ ಬಿಜಿನೆಸ್ ಮಾಡಿದರೂ ನಮಗೆ ಬೆದರಿಕೆ ಹಾಕುವ ಕೆಲಸಕ್ಕೆ ಗುರೂಜಿ ಮುಂದಾಗಿದ್ದರು. ಒಂದಿಲ್ಲೊಂದು ಸಮಸ್ಯೆಯನ್ನು ತಂದಿಡುತ್ತಿದ್ದರೆಂದು ಇಬ್ಬರು ಹೇಳಿಕೊಂಡಿದ್ದಾರೆ.

ಇವರಿಂದ ನಾವು ಹಲವು ಸಮಸ್ಯೆ ಎದುರಿಸಿದ್ದೇವೆ. ಬೇರೆ ಬೇರೆ ಊರುಗಳಲ್ಲಿ ಬಿಜಿನೆಸ್ ಮಾಡಿದರೂ ಇವರ ಕಿರಿಕಿರಿ ಮಾತ್ರ ತಪ್ಪಿರಲಿಲ್ಲ. ಹೀಗಾಗಿ ತಾಳ್ಮೆಗೆಟ್ಟು ನಾವೇ ಕೊಲೆ ಮಾಡಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.

ಸಂದಾನಕ್ಕೆಂದು ಕರೆದು ಸಾವಿನ ದಾರಿ ತೋರಿಸಿದ ಹಂತಕರು:

ಗುರೂಜಿ ಜೊತೆ ಸಂಧಾನಕ್ಕೆಂದು ಅಂದು ಹೊಟೇಲ್ ಪ್ರವೇಶಿಸಿದ ಹಂತಕರು ಕೈಯಲ್ಲಿ ದಾಖಲೆ ಪತ್ರಗಳನ್ನ ಹಿಡಿದುಕೊಂಡು ಹೊಟೇಲ್ ಗೆ ಬಂದು ಕೊಲೆ ಬಳಿಕ ದಾಖಲೆ ಪತ್ರಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು.

ಇನ್ನು ದಾಖಲೆ ಪತ್ರಗಳ ಮಧ್ಯೆ ಚಾಕು ತಂದಿದ ಹಂತಕರು ಕೊಲೆ ಬಳಿಕ ಒಂದು ಚಾಕುವನ್ನು ಹೊಟೇಲ್ ಮುಂಭಾಗದ ಕಸದ ರಾಶಿಯಲ್ಲಿ ಎಸೆದಿದ್ದರು. ಸದ್ಯ ಕಸದ ರಾಶಿಯಲ್ಲಿದ್ದ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಾರ್ಗ ಮಧ್ಯೆ ಎಸೆದ ಇನ್ನೊಂದು ಚಾಕುವಿಗಾಗಿ ತಲಾಶ್ ನಡೆಸಿದ್ದಾರೆ.

Edited By : Somashekar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/07/2022 01:25 pm

Cinque Terre

127.49 K

Cinque Terre

3

ಸಂಬಂಧಿತ ಸುದ್ದಿ