ಹುಬ್ಬಳ್ಳಿ: ಅದೊಂದು ಬಡ ಕುಟುಂಬ. ಈ ಕುಟುಂಬಕ್ಕೆ ಆಸರೆಯಾಗಿದ್ದ ಆ ಯುವಕ ಮಾಡಿದ ʼಆ ತಪ್ಪುʼ ಇದೀಗ ಕುಟುಂಬವನ್ನೇ ಸಂಕಷ್ಟಕ್ಕೆ ಸಿಲುಕಿಸಿದೆ. ಯುವಕನ ಮೇಲಿನ ಕೋಪಕ್ಕೆ ಪೊಲೀಸರು ಅಮಾಯಕ ಕುಟುಂಬದ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಅಷ್ಟಕ್ಕೂ ಆ ಯುವಕ ಮಾಡಿದ್ದಾದರೂ ಏನು? ತಿಳಿಯೋಣ ಬನ್ನಿ...
ಹೀಗೆ ಮೊಮ್ಮಗನಿಗಾಗಿ ಕಣ್ಣೀರು ಹಾಕುತ್ತಿರುವ ಅಜ್ಜ. ಪೊಲೀಸರ ಕೈಯಲ್ಲಿ ಹೊಡೆಸಿಕೊಂಡು ಅಳುತ್ತಿರುವ ಹಿರಿಯ ಜೀವ! ಸಹೋದರನ ನೆನಪಿನಲ್ಲಿ ದುಃಖಿಸುತ್ತಿರುವ ಸಹೋದರಿ. ಹೌದು, ಇವೆಲ್ಲದ್ದಕ್ಕೂ ಕಾರಣವಾಗಿದ್ದು ʼಪ್ರೀತಿʼ. ರಾಯನಾಳದ ಯುವಕ ಆನಂದ ತಿಪ್ಪಣ್ಣವರ, ಕುಂದಗೋಳ ಪಟ್ಟಣದ ಯುವತಿಯನ್ನು 2 ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ, ಅವರಿಬ್ಬರೂ ಇದೀಗ ಗುಟ್ಟಾಗಿ ಮನೆ ಬಿಟ್ಟು ಓಡಿದ್ದಾರೆ!
ಇದರಿಂದ ಹುಡುಗಿ ಮನೆಯವರು ಮಾತ್ರವಲ್ಲದೆ, ಕುಂದಗೋಳ ಪೊಲೀಸರೂ ದಿನನಿತ್ಯ ಮನೆಗೆ ಬಂದು ಮಾನಸಿಕ ಕಿರುಕುಳದ ಜತೆಗೆ ದೈಹಿಕ ಹಿಂಸೆಯನ್ನೂ ನೀಡುತ್ತಿದ್ದಾರೆ. ಕನಿಕರ ತೋರದೆ ವಯೋವೃದ್ಧರ ಮೇಲೆ ಹಲ್ಲೆಗೈದಿದ್ದಾರೆ.
ಇನ್ನು ಜೋಡಿ ಹಕ್ಕಿ ಅದೆಲ್ಲೋ ಜೀವನ ನಡೆಸುತ್ತಿದೆ. ಆದರೆ, ಯುವಕನ ಮನೆಯವರಿಗೆ ಪೊಲೀಸರು ಹಾಗೂ ಹುಡುಗಿಯ ಕುಟುಂಬದವರು ಹಿಂಸೆ ನೀಡುತ್ತಿದ್ದಾರೆ. ರಾತ್ರಿ ವೇಳೆ ಮನೆಗೆ ನುಗ್ಗಿ ಸಿಕ್ಕವರನ್ನು ಎಳೆದೊಯ್ದು, ಥಳಿಸುತ್ತಿದ್ದಾರೆ. "ಅಣ್ಣ ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ?" ಎಂದು ಸಹೋದರಿ ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದಾಳೆ.
- ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
17/03/2022 10:02 pm