ಧಾರವಾಡ: ಜಾತಿ ಬೇರೆ ಎಂಬ ಒಂದೇ ಕಾರಣಕ್ಕೆ ಪೋಷಕರು ಪ್ರೇಮಿಗಳಿಬ್ಬರನ್ನು ದೂರ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಆ ಪ್ರೇಮಿಗಳು ಈಗ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೇಟ್ಟಿಲೇರಿದ್ದಾರೆ.
ಹೌದು, ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕುಂಕೂರ ಗ್ರಾಮದ ಚೈತ್ರಾ ಎಂಬ ಯುವತಿ ಹಾವೇರಿ ಜಿಲ್ಲೆಯ ಅಬ್ದುಲ್ ಎಂಬ ಯುವಕನ ಜೊತೆ ಪ್ರೀತಿ ಮಾಡಿದ್ದಳು. ಕಳೆದ 5 ವರ್ಷಗಳಿಂದ ಇವರಿಬ್ಬರ ನಡುವೆ ಪ್ರೇಮ ಇದ್ದ ಕಾರಣ, ಮದುವೆಯನ್ನೂ ಮಾಡಿಕೊಂಡಿದ್ದರು. ಆದರೆ ಈ ವಿಷಯ ತಿಳಿದ ಇಬ್ಬರ ಮನೆಯವರು ರಾಜಿ ಮಾಡುತ್ತೇವೆ ಎಂದು ಕರೆದು, ಇಬ್ಬರನ್ನೂ ದೂರ ಮಾಡಿದ್ದರು. ಆದರೆ ಈಗ ಇವರಿಬ್ಬರು ಮತ್ತೇ ಒಂದಾಗಿದ್ದಾರೆ. ಆದರೆ ಯುವತಿ ಮನೆಯವರು ತಮ್ಮ ಮಗಳು ಕಿಡ್ನ್ಯಾಪ್ ಆಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೇ ಯುವಕನ ಮನೆಯವರಿಗೆ ಕಿರುಕುಳ ನೀಡುತಿದ್ದಾರೆ. ಈ ವಿಷಯ ತಿಳಿದ ಈ ಪ್ರೇಮಿಗಳು ಎಸ್‍ಪಿ ಕಚೇರಿಗೆ ಬಂದಿದ್ದಾರೆ. ನಾನು ಕಿಡ್ನ್ಯಾಪ್ ಆಗಿಲ್ಲ, ನಮ್ಮ ಮನೆಯವರು ನಮ್ಮನ್ನು ದೂರ ಮಾಡುತ್ತಿರುವುದರಿಂದ ನಮಗೆ ರಕ್ಷಣೆ ನೀಡಿ ಎಂದು ಇವರು ಕೇಳಿಕೊಂಡಿದ್ದಾರೆ.
ಅಲ್ಲದೇ ನಾವು ಹೇಗಾದರೂ ಜೀವನ ನಡೆಸುತ್ತೇವೆ. ನಮ್ಮನ್ನು ನಮ್ಮ ಪಾಡಿಗೆ ಬಿಡಿ ಎನ್ನುತ್ತಿರುವ ಇವರು, ಈಗಾಗಲೇ ನಾವು ಮದುವೆ ಮಾಡಿಕೊಂಡಿದ್ದೇವೆ ಎನ್ನುತ್ತಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಹೇಗೆ ಬಗೆಹರಿಸುತ್ತಾರೋ ಕಾದು ನೋಡಬೇಕು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/02/2022 08:30 pm