ವರದಿ: ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ
ಕುಂದಗೋಳ : ನಿಮ್ಮ ಮಗುವನ್ನು ನಾವು ಎಲ್ಲರಂತೆ ಎತ್ತರ ಮಾಡ್ತಿವಿ ಅದಕ್ಕೆ ಬೇಕಾದ ಔಷಧಿ ಬೆಲ್ಟ್ ತಂದು ಕೊಡ್ತಿವಿ ನಾವು ಹುಬ್ಬಳ್ಳಿಯ ಕ್ಯಾನ್ಸರ್ ಹಾಸ್ಪಿಟಲ್'ಯಿಂದ ಬಂದಿದ್ದೇವೆ ಎಂದು ಸುಳ್ಳು ಹೇಳಿದ ದುರುಳರು ಈ ಬಡ ಪಾಲಕರ ಮಗಳ ಕುಬ್ಜತೆಯನ್ನೇ ಗಾಳಗಾಗಿವಾಗಿಸಿಕೊಂಡು ಬರೋಬ್ಬರಿ 6.600 ರೂಪಾಯಿ ಪೋನ್ ಪೇ ಮಾಡಿಸಿಕೊಂಡು ಯಾವುದೇ ಔಷಧಿ ಕೊಡದೇ ಎಸ್ಕೇಪ್ ಆಗಿದ್ದಾರೆ.
ಹೌದು ! ಇಂತಹದ್ದೊಂದು ಘಟನೆ ಕುಂದಗೋಳ ತಾಲೂಕಿನ ಕಡಪಟ್ಟಿ ಗ್ರಾಮದಲ್ಲಿ ಕಳೆದ ಎರಡು ತಿಂಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ, ಈತನ ಹೆಸರು ಗುರುಸಿದ್ಧಗೌಡ ಪಾಟೀಲ ಹುಟ್ಟು ಕುಬ್ಜರಾದ ಇವರ ಮಗಳು ಸಹ ತನ್ನ 7ನೇ ವಯಸ್ಸಿನಲ್ಲೂ ಈ ಪಾಟಿ ಕುಬ್ಜತೆ ಹೊಂದಿದ್ದಾಳೆ.
ತಾಯಿ ಶಿದ್ಧಲಿಂಗವ್ವ ಮಗಳು ಎಲ್ಲರಂತೆ ಎತ್ತರಾದ್ರೇ ಸಾಕು ಎಂದು ಮನೆಯಲ್ಲಿ ಯಾರು ಇರದ ವೇಳೆ ಮನೆ ಬಾಗಿಲಿಗೆ ಇಲ್ನೋಡಿ ಈ "ಕೇರಳ್ ಹರ್ಬಲ್ ಟ್ರಿಟೆಮೇಂಟ್ ಎಂಬ ವಿಸಿಟಿಂಗ್ ಕಾರ್ಡ್" ಹಿಡಿದು ಔಷಧಿ ಕೊಡುತ್ತೇವೆಂದು ಬಂದ ಮೋಸಗಾರಿಗೆ ತನ್ನ ಗೆಳತಿ ಮೂಲಕ 6.600 ರೂಪಾಯಿ ಹಣ ಪೋ ಮಾಡಿಸಿದ್ದಾಳೆ. ಹಣ ಪಡೆದ ದುರುಳರು ಔಷಧಿ ನೀಡದೆ ಮರಳಿ ಹಣವನ್ನೂ ಕೊಡದೆ ಈ ಕುಬ್ಜ ಮಗುವಿನ ಪಾಲಕರಿಗೆ ಮನಬಂದಂತೆ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿದ್ದಾರಂತೆ ಪೋನ್ ಕಟ್ ಮಾಡಿದ್ದಾರಂತೆ.
ಇನ್ನೂ ಹಣ ಕಳೆದುಕೊಂಡ ದಾರಿ ಕಾಣದ ಕುಟುಂಬಸ್ಥರು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಗೆ ಹೋದ್ರೆ ಅವ್ರು ಧಾರವಾಡಕ್ಕೆ ಹೋಗಿ ಕಂಪ್ಲೇಂಟ್ ಕೊಡುವಂತೆ ತಿಳಿಸಿದ್ದಾರೆ ಪಾಪಾ ಕುಬ್ಜ ತಂದೆ ತಾಯಿಗಳು ಧಾರವಾಡ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದಾಗ ಅಲ್ಲಿನ ಅಧಿಕಾರಿಗಳು ಪೊಲೀಸ್ ಠಾಣಾ ಸಂಪರ್ಕ ಸಂಖ್ಯೆ ಕೊಟ್ಟು ಕಳುಹಿಸಿದ್ದಾರೆ ವಿನಃ ಇದುವರೆಗೂ ಮೋಸಗಾರರ ಸುಳಿವಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲಾ.
ಒಟ್ಟಾರೆ ಸ್ವಿರ್ಟ್ ಮಾರ್ಟ್ ಒಳಗೆ ಕೆಲ್ಸ್ ಮಾಡುವ ಈ ಕುಬ್ಜ ತಂದೆ ಕೂಲಿ ಮಾಡುವ ತಾಯಿ ಮಗಳು ಐಶ್ವರ್ಯ ಎತ್ತರವಾಗ್ಲಿ ಎಂದು ಸಾಲ ಮಾಡಿ ಕೊಟ್ಟ ಹಣ ಮತ್ತು ನಂಬಿಕೆ ಎರೆಡು ಕಳೆದುಹೋಗಿದೆ.
Kshetra Samachara
09/10/2021 06:16 pm