ಧಾರವಾಡ: ಜಿ.ಪಂ. ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿ ಇರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜಾಮೀನು ಅರ್ಜಿ ತೀರ್ಪು ಇಂದು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಕಳೆದ ಬಾರಿ ವಿಚಾರಣೆಯಲ್ಲಿ ವಾದ- ಪ್ರತಿವಾದ ಆಲಿಸಿದ್ದ ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ಹಾಗೂ ವಿಶೇಷ ಸಿಬಿಐ ನ್ಯಾಯಾಲಯ, ಡಿ. 14ರಂದು ತೀರ್ಪು ಹೊರಡಿಸುವುದಾಗಿ ತಿಳಿಸಿತ್ತು. ಆದ್ದರಿಂದ ಇಂದು ಬೆಳಗ್ಗೆ ಅಥವಾ ಮಧ್ಯಾಹ್ನ ಆದೇಶ ಪ್ರಕಟಿಸುವ ಸಾಧ್ಯತೆ ಇದೆ ಎಂದು ವಿನಯ ಪರ ವಕೀಲರು ತಿಳಿಸಿದ್ದಾರೆ.
Kshetra Samachara
14/12/2020 07:39 am