ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಊಟ ಕೊಡಿಸುವ ನೆಪದಲ್ಲಿ 40ರ ಬುದ್ಧಿಮಾಂದ್ಯ ಮಹಿಳೆ ಮೇಲೆ ರೇಪ್- ಕಾಮುಕನ ಬಂಧನ

ಹಾವೇರಿ: ಊಟ ಕೊಡಿಸುವ ನೆಪದಲ್ಲಿ ಬುದ್ಧಿಮಾಂದ್ಯ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನನ್ನು ಹಾವೇರಿ ಪೊಲೀಸರು ಬಂಧಿಸಿದ್ದಾರೆ.

ಹಾವೇರಿ ತಾಲೂಕಿನ ಯತ್ತಿನಹಳ್ಳಿ ಗ್ರಾಮದ ತಸ್ಲೀಮ್ ಸೆರವಾಡ (23) ಬಂಧಿತ ಆರೋಪಿ. ಸಂತ್ರಸ್ತೆಯು 40 ವರ್ಷದವರಾಗಿದ್ದಾರೆ. ಆರೋಪಿ ತಸ್ಲೀಮ್ ಡಿಸೆಂಬರ್‌ 7ರಂದು ಮಧ್ಯರಾತ್ರಿ ಊಟ ಕೊಡಿಸುವ ನೆಪದಲ್ಲಿ ಮಹಿಳೆಯನ್ನು ಎಪಿಎಂಸಿ ಬಳಿಯ ಉಜ್ಜೀವನ್ ಫೈನಾನ್ಸ್‌ ಕಟ್ಟಡಕ್ಕೆ ಕರೆದೊಯ್ದು ಅತ್ಯಾಚಾರ ಎಸೆಗಿದ್ದ.

ಕಟ್ಟಡದ ಮಾಲೀಕ ನವೀನ್‌ಕುಮಾರ್ ತೋಟಣ್ಣನವರು ಅವರು ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾದ ದೃಶ್ಯವನ್ನು ನೋಡುತ್ತಿದ್ದಾಗ ಕಾಮುಕ ಕೃತ್ಯ ಬಯಲಾಗಿದೆ. ತಕ್ಷಣವೇ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು 48 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

12/12/2020 11:04 pm

Cinque Terre

51.82 K

Cinque Terre

3

ಸಂಬಂಧಿತ ಸುದ್ದಿ