ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿನಯ ಕುಲಕರ್ಣಿ ಸೋದರ ಮಾವ ಸಿಬಿಐ ವಶಕ್ಕೆ

ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿ ಅವರನ್ನು ವಿಜಯಪುರದಲ್ಲಿ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಯೋಗೀಶಗೌಡ ಗೌಡರ ಹತ್ಯೆಗೆ ಶಸ್ತ್ರಾಸ್ತ್ರ ಪೂರೈಸಿದ ಆರೋಪದ ಹಿನ್ನೆಲೆ ಚಂದ್ರಶೇಖರ ಅವರನ್ನು ಸಿಬಿಐ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆ‌ಯಲ್ಲಿ ಧಾರವಾಡದ ಉಪನಗರ ‌ಪೊಲೀಸ್ ಠಾಣೆ ಎದುರಿಗೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ‌. ಮಾಜಿ ಸಚಿವ ವಿನಯ್ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿ‌ ಅವರನ್ನು ಧಾರವಾಡ ಉಪನಗರ ಠಾಣೆಗೆ‌‌ ಕರೆ‌‌ ತರುವ ಸಾಧ್ಯತೆಯಿದ್ದು, ಭದ್ರತೆ ದೃಷ್ಟಿಯಿಂದ ಪೊಲೀಸರು ಸೂಕ್ತ ಬಿಗಿ ಬಂದೋಬಸ್ತ್ ಮಾಡಿಕೊಳ್ಳುತ್ತಿದ್ದಾರೆ.

ಚಂದ್ರಶೇಖರ ‌ಇಂಡಿ ಈಗಾಗಲೇ ಸಾಕಷ್ಟು ಬಾರಿ ಸಿಬಿಐ ವಿಚಾರಣೆಗೆ ಹಾಜರಾಗಿದ್ದರು. ಸಿಬಿಐ ಅಧಿಕಾರಿಗಳು ಇಂಡಿ ಅವರಿಂದ ಸಾಕಷ್ಟು ಮಾಹಿತಿಗಳನ್ನು ಕೂಡ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

Edited By :
Kshetra Samachara

Kshetra Samachara

12/12/2020 09:08 pm

Cinque Terre

87.85 K

Cinque Terre

0

ಸಂಬಂಧಿತ ಸುದ್ದಿ