ಹುಬ್ಬಳ್ಳಿ: ಮಹಾನಗರ ಪಾಲಿಕೆ ನೀಡಿದ್ದ ಪರವಾನಿಗೆಯನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣ ಒಂದು ಬೆಳಕಿಗೆ ಬಂದಿದೆ..ಕೊಟ್ಟಿದ್ದೆ ಕಡಿಮೆ ಸೈಟ್ ಇದ್ದರೂ ಸಹ ಇಡೀ ಬಿಲ್ಡಿಂಗ್ ನ್ನೇ ಕಬಳಿಸಿಕೊಂಡ ಆರೋಪ ಸದ್ಯ ಕೇಳಿ ಬಂದದ್ದು, 4 ಜನರ ಹೆಸರಲ್ಲಿ ಬರೋಬ್ಬರಿ ದೊಡ್ಡ ಬಿಲ್ಡಿಂಗ್ ಸಿದ್ಧವಾಗೋಕೆ ಸದ್ದಿಲ್ಲದೆ ತಯಾರಿ ನಡೆಸಿದೆ.. ಅಷ್ಟಕ್ಕೂ ಯಾವುದು ಆ ಬಿಲ್ಡಿಂಗ್ ಅಂತೀರಾ..? ಈ ಸ್ಟೋರಿ ನೋಡಿ....
ಹೀಗೆ ಎದ್ದು ನಿಂತಿರುವ ಪಿಲ್ಲರ್ ಗಳು..ಮತ್ತೊಂದೆಡೆ ಕೆಲಸಗಾರರು ಮತ್ತು ಬಿಲ್ಡಿಂಗ್ ಮಾಲೀಕರ ಜೊತೆಗೆ ಮಾತಿನ ಚಕಮಕಿ..ವಾಣಿಜ್ಯ ನಗರಿ ಹುಬ್ಬಳ್ಳಿಯ ದಾಜಿಬಾನಪೇಟೆಯ ಮಥುರಾ ಸೆಂಟರ್ ಕಾಂಪ್ಲೆಕ್ಸ್ 4 ನೆ ಮಹಡಿಯ ದೃಶ್ಯಗಳಿವು.
ಈ ಕಾಂಪ್ಲೆಕ್ಸ್ ನಲ್ಲಿ ಈಗಾಗಲೇ 30ಕ್ಕೂ ಹೆಚ್ಚು ಮಳಿಗೆ ಅಂಗಡಿಗಳಿದ್ದು ಈ ಕಟ್ಟಡವನ್ನು 20 ವರ್ಷಗಳ ಹಿಂದೆಯೇ ಕಟ್ಟಲಾಗಿತ್ತು.ಆದರೆ ಖಾಸಗಿ ಕಟ್ಟಡ ಆಗಿರೋದರಿಂದ ಇದಕ್ಕೆ ಸಂಘ ಸಹ ಇದೆ. ಅಲ್ಲದೆ ಮಹಡಿ ಮೇಲೆ ಮತ್ತೊಂದು ಕಟ್ಟಡ ಕಟ್ಟಬೇಕು ಅಂದರೆ ಇದಕ್ಕೆ ಪಾಲಿಕೆಯ ಪರವಾನಿಗೆ ಬೇಕೇ ಬೇಕು..ಆ ಪರವಾನಿಗೆ ಸಹ ಇವರಿಗೆ ಒಂದೇ ಒಂದು ದಿನದಲ್ಲಿ ಪಾಲಿಕೆ ಅನುಮತಿಯನ್ನು ಸಹ ನೀಡಿದ್ದೆ ದೊಡ್ಡ ಅಚ್ಚರಿಗೆ ಕಾರಣವಾಗಿದೆ.
ಶಿಲ್ಪಾ, ರೀನಾ, ಪಾಯಲ್ ಮತ್ತು ಶೈಪಾಲಿ ಕೊಠಾರಿ ಯವರ ಹೆಸರಿನಲ್ಲೇ ಒಟ್ಟು 3 ಸಾವಿರ ಚದರ ಮೀಟರ್ ಜಾಗವನ್ನ ಇದೆ ಕಟ್ಟಡದ ಜಾಗದ ಮಾಲೀಕನಿಂದ ಖರೀದಿಗೆ ಪಡೆದು, ಇದೀಗ 12 ಸಾವಿರ ಚದರ ಮೀಟರ್ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ ಅಂತ ಆರೋಪಿಸಲಾಗಿದೆ
ಇನ್ನೂ ಈ ಕಟ್ಟಡಕ್ಕೆ ಪರವಾನಿಗೆ ಸಿಕ್ಕಿದ್ದು 31 ಜುಲೈ 2018 ರಲ್ಲಿ..ಆದರೆ ಅಲ್ಲಿಂದ ಇಲ್ಲಿಯವರೆಗೆ ಸುಮ್ಮನಿದ್ದ ಮಾಲೀಕರು ಇದೀಗ ದಿಢೀರನೆ ಕಟ್ಟಡ ಕಾರ್ಯಕ್ಕೆ ಮುಂದಾಗಿದ್ದಾರೆ..20 ವರ್ಷಗಳ ಈ ಕಟ್ಟಡ ಸದ್ಯ ಕೆಲಸ ಆರಂಭವಾದಗಿನಿಂದ ಅಲ್ಲಲ್ಲಿ ಬಿರುಕು ಬಿಡುತ್ತಿದೆ.
ಧಾರವಾಡದ ಕಟ್ಟಡ ಕುಸಿತವಾಗಿ ಹಲವಾರು ಜನರ ಪ್ರಾಣಿಹಾನಿ ಆದ ಹಿನ್ನೆಲೆ ಈ ಅಕ್ರಮ ಕಟ್ಟಡ ಪೂರ್ಣವಾದರೆ ಅಂತಹ ಸ್ಥಿತಿ ಈ ಕಟ್ಟಡಕ್ಕೂ ಬರಬಹುದು ಅನ್ನುವ ಆತಂಕದಲ್ಲಿದ್ದಾರೆ ಇಲ್ಲಿನ ವ್ಯಾಪಾರಸ್ಥರು.
ಅಲ್ಲದೆ ಅನುಮತಿ ಪಡೆದು ವರ್ಷದ ನಂತರ ಮತ್ತೊಂದು ಬಾರಿ ಅದನ್ನ ಮತ್ತೊಂದು ಬಾರಿ ಅರ್ಜಿ ಸಲ್ಲಿಸಿ ಮರು ನೋಂದಣಿ ಮಾಡಿಸಬೇಕಿತ್ತು, ಆದರೆ ಇದೆಲ್ಲವನ್ನೂ ಮಾಡಿಸದೆ ಕಟ್ಟಡ ಕಾರ್ಯ ಆರಂಭಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟಾರೆ ಅಕ್ರಮವಾಗಿ ಆರಂಭವಾದ ಕಟ್ಟಡಕ್ಕೆ ಪಾಲಿಕೆ ಹೇಗೆ ಪರವಾನಿಗೆ ನೀಡಿತು ಅನ್ನೋ ಪ್ರಶ್ನೆ ಒಂದು ಕಡೆಯಾದ್ರೆ ಇತ್ತ 2 ವರ್ಷದ ನಂತ್ರ ಕಟ್ಟಡ ಕಾರ್ಯ ಆರಂಭಿಸಿರುವ ಉದ್ಯಮಿಗಳು ಮತ್ತೆ ಪಾಲಿಕೆ ಗಮನಕ್ಕೆ ತರದೆ ಇರೋದು ಸದ್ಯ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.ಇನ್ನಾದ್ರೂ ಪಾಲಿಕೆ ಸಿಬ್ಬಂದಿ ಎಚ್ಚೆತ್ತು ಈ ಕಟ್ಟಡದ ಬಗ್ಗೆ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ
Kshetra Samachara
07/12/2020 11:36 am